ಸರ್ಕಾರ ಹಾಕುವ ತೆರಿಗೆ ಬಗ್ಗೆ ಇತ್ತೀಚೆಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ತೆರಿಗೆ ಪ್ರಮಾಣದ ಬಗ್ಗೆ ಆಕ್ಷೇಪಗಳಿವೆ. ಈ ನಡುವೆ ಗ್ರಾಹಕರು ಒಂದು ಟೊಯೊಟಾ ಫಾರ್ಚೂನರ್ ಖರೀದಿ ಮಾಡಿದರೆ ಸರ್ಕಾರದ ಬೊಕ್ಕಸಕ್ಕೆ ಆಗುವ ಆದಾಯವೆಷ್ಟು ಎಂಬ ಮಾಹಿತಿ ಅಚ್ಚರಿ ಹುಟ್ಟಿಸುವಂತಿದೆ.
ಪ್ರೀಮಿಯಂ ವಾಹನಕ್ಕೆ ಖರೀದಿದಾರರು 20 ಲಕ್ಷ ರೂಪಾಯಿಗಿಂತ ಕಡಿಮೆಯಿಲ್ಲದಂತೆ ಪಾವತಿಸುವುದರಿಂದ ಎಸ್‌ಯುವಿ ಖರೀದಿ ಭಾರೀ ವ್ಯವಹಾರವಾಗಿದೆ. ಉದಾಹರಣೆಗೆ, ಟೊಯೊಟಾ ಫಾರ್ಚುನರ್ ಹೆಚ್ಚು ಜನಪ್ರಿಯ ಉತ್ಪನ್ನವಾಗಿದ್ದು, ಮಾರುಕಟ್ಟೆಯಲ್ಲಿ 31 ಲಕ್ಷ ರೂಪಾಯಿಂದ 48 ಲಕ್ಷ ರೂಪಾಯಿವರೆಗಿನ (ಎಕ್ಸ್ ಶೋ ರೂಂ, ದೆಹಲಿ) ದರದಲ್ಲಿ ಲಭ್ಯವಿದೆ.
ಇತ್ತೀಚೆಗೆ ಪ್ರಕಟವಾಗಿರುವ ವಿವರಣಾತ್ಮಕ ವಿಡಿಯೋದ ವಿವರ ನಂಬುವುದಾದರೆ, ಟೊಯೊಟಾ ಫಾರ್ಚುನರ್ ಮಾರಾಟವಾದಾಗ, ತಯಾರಕರು ಒಟ್ಟು 35,000-40,000 ರೂಪಾಯಿ ಗಳಿಸುತ್ತಾರೆ. ಸರ್ಕಾರಕ್ಕೆ ಸೆಸ್ ಮತ್ತು ತೆರಿಗೆಗಳ ರೂಪದಲ್ಲಿ 18 ಲಕ್ಷ ರೂಪಾಯಿ ಸಿಗುತ್ತದೆ.ವಿತರಕರ ವಿಚಾರಕ್ಕೆ ಬರುವುದಾದರೆ, ಒಂದು ವಾಹನ ಮಾರಾಟದ ಮೇಲಿನ ಗಳಿಕೆಯು ಕಾರಿನ ಎಕ್ಸ್-ಶೋರೂಮ್ ಬೆಲೆಯಲ್ಲಿ ಅವರು ಪಡೆಯುವ ಕಮಿಷನ್ ಅನ್ನು ಅವಲಂಬಿಸಿರುತ್ತದೆ, ಇದು ನಿಜವಾದ ಬೆಲೆ ಮತ್ತು ಜಿಎಸ್ಟಿ ಮಾತ್ರ ಒಳಗೊಂಡಿರುತ್ತದೆ. ಅವರು ವಿಮೆ, ಬಿಡಿಭಾಗಗಳ ಮಾರಾಟ ಮತ್ತು ಹಣಕಾಸಿನ ವ್ಯವಹಾರದ ಮೇಲೆ ಕಮಿಷನ್ ಗಳಿಸುತ್ತಾರೆ. ಎಲ್ಲಾ ಲೆಕ್ಕಾಚಾರಗಳನ್ನು ಪರಿಗಣಿಸಿ, ಫಾರ್ಚುನರ್ ಅನ್ನು ಮಾರಾಟ ಮಾಡಿದ ನಂತರ ಡೀಲರ್ ಸರಿಸುಮಾರು 1 ಲಕ್ಷ ರೂಪಾಯಿ ಗಳಿಸುತ್ತಾರೆ.