Breaking News

ದಕ್ಷಿಣ ಕನ್ನಡದಲ್ಲಿ ಕಟ್ಟಡವೊಂದರ ಮೇಲಿಂದ ಸುರಿಯಿತು ಹಣದ ಮಳೆ!

Spread the love

ಬಂಟ್ವಾಳ(ದಕ್ಷಿಣ ಕನ್ನಡ): ಬಿ.ಸಿ.ರೋಡ್​ನ ಹೃದಯಭಾಗದಲ್ಲಿರುವ ಕಟ್ಟಡವೊಂದರ ಕೊಠಡಿಯಿಂದ ಗುರುವಾರ ಹಣದ ಮಳೆ ಸುರಿದಿದೆ!

ಕಟ್ಟಡದ ಮೇಲಿಂದ ಹಣ ಬೀಳುವುದನ್ನು ಕಂಡ ಜನ ಹಣ ಹೆಕ್ಕಲು ಮುಗಿಬಿದ್ದಿದ್ದರಿಂದ ಕೆಲಕಾಲ ಸರ್ವೀಸ್​ ರಸ್ತೆಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು.

 

ಬಿ.ಸಿ.ರೋಡ್​ನ ಕಟ್ಟಡದಲ್ಲಿ ನಡೆಯುತ್ತಿದ್ದ ರಿಕ್ರಿಯೇಶನ್​ ಕ್ಲಬ್​ನಲ್ಲಿ ಅಕ್ರಮ ಜೂಜಾಟ ನಡೆಯುತ್ತಿರುವ ಬಗ್ಗೆ ದೂರು ಬಂದಿತ್ತು. ಈ ಹಿನ್ನೆಲೆ ಸಹಾಯಕ ಪೊಲೀಸ್​ ಅಧೀಕ್ಷಕರ ಅನುಮತಿ ಪಡೆದು ಪೊಲೀಸ್​ ನಿರೀಕ್ಷಕ ವಿವೇಕಾನಂದ ಮತ್ತು ಸಿಬ್ಬಂದಿ ದಾಳಿ ನಡೆಸಿದ್ದರು. 28 ಆರೋಪಿಗಳು ಅಕ್ರಮ ಜೂಜಾಟದಲ್ಲಿ ತೊಡಗಿದ್ದರು. ಪೊಲೀಸ್​ ದಾಳಿಯಿಂದ ಆತಂಕಕ್ಕೊಳಗಾದ ಕೆಲವರು ಕಿಟಕಿಗಳ ಮೂಲಕ ನೋಟುಗಳನ್ನು ಕೆಳಗೆ ಎಸೆದಿದ್ದು, ನೋಟುಗಳು ಎಲ್ಲೆಂದರಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಕಟ್ಟಡದ ಮೇಲಿಂದ ಹಣ ಬೀಳುವುದನ್ನು ಕಂಡ ಜನ ನೋಟುಗಳನ್ನು ಆಯ್ದುಕೊಳ್ಳಲು ನಾ ಮುಂದು- ತಾ ಮುಂದು ಎಂಬಂತೆ ಮುಗಿಬಿದ್ದಿದ್ದರು. ಅತ್ತ ಪೊಲೀಸರು ಆರೋಪಿಗಳನ್ನು ಬಂಧಿಸಿ 26,900 ರೂ. ವಶಕ್ಕೆ ಪಡೆದಿದ್ದಾರೆ.


Spread the love

About Laxminews 24x7

Check Also

ಫ್ರಾನ್ಸ್ ಕೈಟ್ ಉತ್ಸವದಲ್ಲಿ ಮಂಗಳೂರಿನ ಗಾಳಿಪಟ: ಫ್ರೆಂಚರ ನಾಡಿನಲ್ಲಿ ಹಾರಲಿದೆ ‘ಕುಡ್ಲದ ತೇರು

Spread the love ಮಂಗಳೂರು: ಬಾನಾಡಿಯಲ್ಲಿ ಹಕ್ಕಿಗಳಂತೆ ಹಾರಾಡುವ ಗಾಳಿಪಟ ಈಗ ಅಂತಾರಾಷ್ಟ್ರೀಯ ಹಬ್ಬವಾಗಿದೆ. ಈ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಸೆಪ್ಟಂಬರ್​ನಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ