ಚಿತ್ರದುರ್ಗ: ಸುಮಾರು 200ಕ್ಕೂ ಹೆಚ್ಚು ರೈತರು, ಕುರಿಗಾಹಿಗಳು ವಿವಿಸಾಗರ ಹಿನ್ನೀರು ಪ್ರದೇಶದ ಸೊಬಗನ್ನು ಹೆಲಿಕಾಪ್ಟರ್‌ನಲ್ಲಿ ವೀಕ್ಷಿಸಿ ಸಂಭ್ರಮಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ವಿವಿಸಾಗರ ಹಿನ್ನೀರು ಪ್ರದೇಶದಲ್ಲಿ ಹೆಲಿಟೂರಿಸಂ ಅಭಿವೃದ್ಧಿ ಹಿನ್ನಲೆಯಲ್ಲಿ ಶಾಸಕ ಗೂಳಿಹಟ್ಟಿ ಶೇಖರ್ ಅವರು ಗ್ರಾಮಾಂತರ ಪ್ರದೇಶದ ಜನರನ್ನು ಹೆಲಿಕಾಪ್ಟರ್‌ನಲ್ಲಿ ಸುತ್ತಿಸಿದ್ದಾರೆ. ಹೆಲಿಕಾಪ್ಟರ್‌ನಲ್ಲಿ ಸುತ್ತಿದ 200ಕ್ಕೂ ಅಧಿಕ ಜನರು ಮಲೆನಾಡನ್ನೇ ನಾಚಿಸುವಂತಹ ಸೊಬಗನ್ನು ಕಂಡು ಬೆರಗಾಗಿದ್ದಾರೆ.
ಈ ಹಿಂದೆ ಹಂಪಿಯಲ್ಲಿ ಹೆಲಿಟೂರಿಸಂ ಆರಂಭಿಸಲಾಗಿತ್ತು. ಆಗ ಪ್ರವಾಸಿಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಐಲ್ಯಾಂಡ್ ನಿರ್ಮಾಣ, ಹೆಲಿಟೂರಿಸಂ ಹಾಗೂ ಬೋಟಿಂಗ್‍ಗೆ ಸಿದ್ಧತೆ ನಡೆದಿತ್ತು.