Breaking News

ರಾಜ್ಯದ ಉದ್ಯಮಿಗಳಿಗೆ ಐಟಿ ಶಾಕ್! 600 ಅಧಿಕಾರಿಗಳ, 50ಕ್ಕೂ ಹೆಚ್ಚು ಕಡೆ ದಾಳಿ!

Spread the love

ಬೆಂಗಳೂರು : ರಾಜ್ಯದ ಪ್ರಮುಖ ಉದ್ಯಮಿಗಳಿಗೆ ಇಂದು ಐಟಿ (ಆದಾಯ ತೆರಿಗೆ ಇಲಾಖೆ) ಅಧಿಕಾರಿಗಳು ಬಿಗ್ ಶಾಕ್ ನೀಡಿದ್ದಾರೆ. ಬೆಳಗ್ಗೆ ಏಕಕಾಲದಲ್ಲಿ ರಾಜ್ಯದ 50ಕ್ಕೂ ಹೆಚ್ಚು ಕಡೆಗಳಲ್ಲಿ ಐಟಿ ದಾಳಿ ಮಾಡಿ, ಶೋಧ ಕಾರ್ಯ ನಡೆಸಿದೆ. ರಾಜಧಾನಿ ಬೆಂಗಳೂರಿನಲ್ಲೆ 35ಕ್ಕೂ ಹೆಚ್ಚು ಕಡೆ ಐಟಿ ದಾಳಿ ಮಾಡಲಾಗಿದೆ.

 

ಆದಾಯ ಮುಚ್ಚಿಟ್ಟು ಐಟಿ ರಿಟರ್ನ್ಸ್‌ ಸಲ್ಲಿಕೆ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ಅನೇಕ ಉದ್ಯಮಿಗಳ ಮನೆ ಹಾಗೂ ಆಫೀಸ್ ಗಳ ಮೇಲೆ 600ಕ್ಕೂ ಹೆಚ್ಚು ಐಟಿ ಅಧಿಕಾರಿಗಳ ಟೀಂ ರಾಜ್ಯದ 50ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆಸಿದೆ. ಆದಾಯ ತೆರಿಗೆ ಸಲ್ಲಿಕೆಗಿಂತ ಹೆಚ್ಚಿನ ಆದಾಯ ಹೊಂದಿರುವವರನ್ನು ಪತ್ತೆ ಮಾಡಿ ಈ ದಾಳಿ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಐಟಿ ಅಧಿಕಾರಿಗಳು ಮನೆಗಳ ಮೇಲೆ ಸರ್ಚ್ ವಾರೆಂಟ್ ತಂದು ರೈಡ್ ಮಾಡಿ, ದಾಖಲೆ ಪರಿಶೀಲನೆ ಮಾಡುತ್ತಿದ್ದಾರೆ.

 

ಎಂಬೆಸಿ ಗ್ರೂಪ್​ ನಿರ್ದೇಶಕ ನರಪತ್ ಸಿಂಗ್ ಚರೋಡಿಯಾ ಮನೆ ಮೇಲೆ ರೇಡ್​ ಮಾಡಲಾಗಿದೆ. ನರಪತ್ ಸಿಂಗ್ ಚರೋಡಿಯಾ ಫ್ಲ್ಯಾಟ್ ಮೇಲೆ ದಾಳಿ ಮಾಡಿದೆ. ಸದಾಶಿವನಗರದ ಎಂಬೆಸ್ಸಿ ಆರ್ಕಿಡ್​ ಅಪಾರ್ಟ್​ಮೆಂಟ್​ನಲ್ಲಿ ಅಧಿಕಾರಿಗಳು ಶೋಧ ನಡೆಸುತ್ತಿದ್ಧಾರೆ. ಫ್ಲ್ಯಾಟ್ ನಂಬರ್-609ರಲ್ಲಿ ಪರಿಶೀಲನೆ ಮಾಡುತ್ತಿದ್ದಾರೆ. ಐಟಿ ತಂಡ ತೆರಿಗೆ ವಂಚನೆ ಪ್ರಕರಣದಲ್ಲಿ ದಾಳಿ ಮಾಡುತ್ತಿದ್ದಾರೆ.

ಆದಾಯ ತೆರಿಗೆ ಇಲಾಖೆಯು ಬೆಂಗಳೂರು, ಗುರುಗ್ರಾಮ್ ಮತ್ತು ಇತರ ಸ್ಥಳಗಳಲ್ಲಿಎಂಬಸಿ ಗ್ರೂಪ್‌ನಲ್ಲಿ ಹುಡುಕಾಟ ನಡೆಸುತ್ತಿದೆ. ಇಂಡಿಯಾ ಬುಲ್ಸ್ ರಿಯಲ್ ಎಸ್ಟೇಟ್, ಎಂಬಸಿ ಗ್ರೂಪ್‌ನೊಂದಿಗೆ ವಿಲೀನಕ್ಕಾಗಿ NCLT ಅನುಮೋದನೆಯನ್ನು ಕೋರಿದೆ. ಎಂಬೆಸಿ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕ ಜೀತು ನಿರ್ವಾಣಿ ವಿರುದ್ಧವೂ ದಾಳಿ ನಡೆದಿದೆ. ರಾಜ್ಯದ ಎಲ್ಲಾ ಎಂಬೆಸಿ ಕಚೇರಿಗಳ ಮೇಲೆ ದಾಳಿ ನಡೆಸಿದ್ದಾರೆ.


Spread the love

About Laxminews 24x7

Check Also

ಗೋಲಿಹಳ್ಳಿಯ ಶ್ರೀ ಶಿವ ಮಂದಿರದಲ್ಲಿ ನೂತನ ಶಿವ ಮುಖವಾಡ ಮತ್ತು ನಂದಿ ಮೂರ್ತಿ ಪ್ರತಿಷ್ಠಾಪನೆ

Spread the love ಗೋಲಿಹಳ್ಳಿಯ ಶ್ರೀ ಶಿವ ಮಂದಿರದಲ್ಲಿ ನೂತನ ಶಿವ ಮುಖವಾಡ ಮತ್ತು ನಂದಿ ಮೂರ್ತಿ ಪ್ರತಿಷ್ಠಾಪನೆ ಖಾನಾಪೂರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ