Breaking News

ಉಲ್ಟಾ ಹೊಡೆದ ರೈತರ ಲೆಕ್ಕಾಚಾರ, ಪ್ರಕೃತಿಯ ಮುನಿಸು ದೇಶ ವಿದೇಶಕ್ಕೆ ಟೊಮೇಟೊ ರಪ್ತು ಮಾಡುತ್ತಿದ್ದ ಮಾರುಕಟ್ಟೆಗೆ ಬರಗಾಲ

Spread the love

ಏಷ್ಯಾದಲ್ಲೇ ಎರಡನೇ ದೊಡ್ಡ ಮಾರುಕಟ್ಟೆ ಎಂಬ ಹೆಗ್ಗಳಿಕೆ ಹೊಂದಿರುವ ಕೋಲಾರದ ಎಪಿಎಂಸಿ ಮಾರುಕಟ್ಟೆ ಸದಾ ಜನರಿಂದ ತುಂಬಿ ತುಳುಕುತ್ತಿದ್ದು ಈಗ ಖಾಲಿ ಖಾಲಿ ಹೊಡೆಯುತ್ತಿದೆ. ಅಲ್ಲಲ್ಲಿ ಅಲ್ಪ ಸ್ವಲ್ಪ ಟೊಮೇಟೊ ಬಾಕ್ಸ್ಗಳು ಕಂಡು ಬರುತ್ತಿವೆ.ಕೋಲಾರ: ಕಳೆದ ಕೆಲವು ದಿನಗಳಿಂದ ಜಿಲ್ಲೆಯಲ್ಲಿ ಬಿಟ್ಟು ಬಿಟ್ಟು ಸುರಿಯುತ್ತಿರುವ ಮಳೆ ಹಾಗೂ ಉಲ್ಟಾಹೊಡೆದ ರೈತರ ಲೆಕ್ಕಾಚಾರದ ಪರಿಣಾಮವಾಗಿ ಏಷ್ಯಾದಲ್ಲೇ ಎರಡನೇ ಅತಿದೊಡ್ಡ ಮಾರುಕಟ್ಟೆ ಎಂಬ ಹೆಗ್ಗಳಿಕೆ ಹೊಂದಿರುವ ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲೇ ಟೊಮೇಟೊಗೆ ಬರ ಬಂದಿದೆ.

ರಪ್ತು ಮಾಡುತ್ತಿದ್ದವರೇ ಈಗ ಆಮದು ಮಾಡಿಕೊಳ್ಳುವ ಸ್ಥಿತಿ ಬಂದಿದೆ.

ಟೊಮೇಟೊ ಸೀಸನ್ನಲ್ಲೇ ಖಾಲಿ ಖಾಲಿ ಹೊಡೆಯುತ್ತಿದೆ ಮಾರುಕಟ್ಟೆ
ಏಷ್ಯಾದಲ್ಲೇ ಎರಡನೇ ದೊಡ್ಡ ಮಾರುಕಟ್ಟೆ ಎಂಬ ಹೆಗ್ಗಳಿಕೆ ಹೊಂದಿರುವ ಕೋಲಾರದ ಎಪಿಎಂಸಿ ಮಾರುಕಟ್ಟೆ ಸದಾ ಜನರಿಂದ ತುಂಬಿ ತುಳುಕುತ್ತಿದ್ದು ಈಗ ಖಾಲಿ ಖಾಲಿ ಹೊಡೆಯುತ್ತಿದೆ. ಅಲ್ಲಲ್ಲಿ ಅಲ್ಪ ಸ್ವಲ್ಪ ಟೊಮೇಟೊ ಬಾಕ್ಸ್ಗಳು ಕಂಡು ಬರುತ್ತಿವೆ. ವರ್ಷದ 365 ದಿನಗಳಲ್ಲೂ ಟೊಮೇಟೊ ಬೆಳೆದು ರಪ್ತು ಮಾಡುತ್ತಿದ್ದ ಮಾರುಕಟ್ಟೆ ಅದರಲ್ಲೂ ಮೇ ತಿಂಗಳಿಂದ ಆಗಸ್ಟ್ ತಿಂಗಳು ಬಂತೆಂದರೆ ಸಾಕು ಕೋಲಾರ ಮರುಕಟ್ಟೆಯಲ್ಲಿ ಟೊಮೇಟೊ ತುಂಬಿ ತುಳುಕುತ್ತಿತ್ತು ಆದರೆ ಈ ವರ್ಷ ಎಲ್ಲರ ಲೆಕ್ಕಾಚಾರಗಳು ಉಲ್ಟಾಹೊಡೆದಿದ್ದು ದೇಶ ವಿದೇಶಕ್ಕೆ ರಪ್ತು ಮಾಡುತ್ತಿದ್ದವರೇ ಈಗ ಬೇರೆ ರಾಜ್ಯಗಳಿಂದ ಟೊಮೇಟೊವನ್ನು ಆಮದು ಮಾಡಿಕೊಳ್ಳುವ ಸ್ಥಿತಿ ಬಂದಿದೆ. 


Spread the love

About Laxminews 24x7

Check Also

ಬ್ಯಾಂಕ್ ಮ್ಯಾನೇಜರ್ ಸಮಯಪ್ರಜ್ಞೆ: ಡಿಜಿಟಲ್ ಅರೆಸ್ಟ್​​ನಿಂದ 84 ಲಕ್ಷ ರೂ. ವಂಚನೆಗೆ ಬ್ರೇಕ್

Spread the loveಮಂಗಳೂರು: ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಅರೆಸ್ಟ್ ಎಂದು ಖದೀಮರು ಅಮಾಯಕರನ್ನು ವಂಚಿಸಿ ಕೋಟಿಗಟ್ಟಲೆ ಹಣ ವಂಚಿಸುತ್ತಿರುವುದು ಬೆಳಕಿಗೆ ಬರುತ್ತಲೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ