ರಾಯಚೂರು: ನಮ್ಮ ಊರಿನಲ್ಲಿ ಪಾನಿಪುರಿ ಮಾರುವರೇ ಗುಜರಾತ್ ನವರು. ಪಾನ್ ಮಸಾಲಾ ಮಾರುವವವರು ಗುಜರಾತ್ ನವರೇ. ಕರ್ನಾಟಕದವರು ಗುಜರಾತ್ ಗೆ ಪಾನಿಪುರಿ, ಜೋಳದ ರೊಟ್ಟಿ ಮಾರಲು ಹೋಗಿದ್ದಾರಾ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಕಳೆದ 36 ವರ್ಷದಿಂದಿದೆ. ಜನರಿಗೆ ಜೆಡಿಎಸ್ ಪರಿಚಯ ಮಾಡುವ ಅವಶ್ಯಕತೆ ಇಲ್ಲ. ನಮ್ಮ ಕನ್ನಡಿಗರು ಪ್ರಧಾನಿಯಾಗಿದ್ದ ಪಕ್ಷ ನಮ್ಮದು. ಹತ್ತಾರು ನೀರಾವರಿ ಯೋಜನೆಗಳನ್ನು ನಮ್ಮ ದೇವೇಗೌಡರು ಮಾಡಿದ್ದಾರೆ. ನೀರಾವರಿ ಯೋಜನೆಗಳನ್ನು ಸರಿಯಾಗಿ ಬಳಸಿಕೊಂಡರೆ ನಾವೇ ದೇಶಕ್ಕೆ ನಂಬರ್ ಒನ್ ಆಗುತ್ತೇವೆ ಎನ್ನುವ ಮೂಲಕ ಬಿಜೆಪಿ ಗುಜರಾತ್ ಮಾಡಲ್ ಪ್ರಚಾರಕ್ಕೆ ಟಾಂಗ್ ಕೊಟ್ಟರು .
ಕಾಂಗ್ರೆಸ್ ಮತ್ತು ಬಿಜೆಪಿ ಚಿಕ್ಕಪ್ಪ ದೊಡ್ಡಪ್ಪನ ಮಕ್ಕಳಿದ್ದಂತೆ. ಇಬ್ಬರ ನಡುವೆ ಕಮಿಷನ್ ವಿಚಾರವಾಗಿ ಜಗಳ ನಡೆಯುತ್ತಿದೆ. ಕಾಂಗ್ರೆಸ್ ಒಡೆದ ಮನೆಯಾಗಿದೆ. ಕಾಂಗ್ರೆಸ್ 20 ಪರ್ಸೆಂಟ್, ಬಿಜೆಪಿ 40 ಪರ್ಸೆಂಟ್ ಕಮಿಷನ್ ವಿಚಾರವಾಗಿ ಅವರ ನಡುವೆಯೇ ಜಗಳ ಶುರುವಾಗಿದೆ ಎಂದರು.
Laxmi News 24×7