ಬಾಗಲಕೋಟೆ : ಗುಂಡು ಹಾರಿಸಿಕೊಂಡು ನಿವೃತ್ತ ಜಡ್ಜ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಾಗಲಕೋಟೆಯ ನವನಗರದಲ್ಲಿ ನಡೆದಿದೆ.
ಮಾನಪ್ಪ ತಳವಾರ (53) ಆತ್ಮಹತ್ಯೆ ಮಾಡಿಕೊಂಡ ನಿವೃತ್ತ ಜಡ್ಜ್ ಆಗಿದ್ದಾರೆ.
ಅಂದ ಹಾಗೇ ಮೂಲತಃ ಶೆಲ್ಲಿಕೇರಿ ಗ್ರಾಮದವರಾಗಿದ್ದ ಮಾನಪ್ಪ ತಳವಾರ ಬಾಗಲಕೋಟೆಯ ನವನಗರದ ಮನೆಯಲ್ಲಿ ಒಬ್ಬರೇ ವಾಸವಾಗಿದ್ದರು..ಇಂದು ಅವರು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾಗಿದೆ.
ಇನ್ನು ಘಟನಾ ಸ್ಥಳಕ್ಕೆ ಸಿಪಿಐ ವಿಜಯಕುಮಾರ್ ಮುರಗುಂಡಿ, ಸಿಪಿಐ ಎಸ್.ಎಂ.ಆವಜಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂಬಂಧ ನವನಗರ ಪೋಲಿಸ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು,ಪ್ರಕರಣದ ತನಿಖೆ ಮುಂದುವರೆದಿದೆ.