Breaking News

ಸಿಐಡಿ (CID) ಅಧಿಕಾರಿಗಳು ಬಂಧನಕ್ಕೆ ತೆರಳಿದ್ದ ವೇಳೆ ಹೈಡ್ರಾಮಾ ಕ್ರಿಯೇಟ್ ಮಾಡಿ ಮೊಬೈಲ್ ಬಿಸಾಕಿದ್ದ: ಡೀಲ್ ರಾಣಿ

Spread the love

ಕಲಬುರಗಿ: ಪಿಎಸ್‍ಐ (PSI)  ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಎಸಗಿ ಮಹಾರಾಷ್ಟ್ರದಲ್ಲಿ ತಲೆಮರೆಸಿಕೊಂಡಿದ್ದ ಡೀಲ್ ರಾಣಿ ದಿವ್ಯಾ ಹಾಗರಗಿ(Divya Hagaragi) ಯನ್ನ ಸಿಐಡಿ (CID) ಅಧಿಕಾರಿಗಳು ಬಂಧನಕ್ಕೆ ತೆರಳಿದ್ದ ವೇಳೆ ಹೈಡ್ರಾಮಾ ಕ್ರಿಯೇಟ್ ಮಾಡಿ ಮೊಬೈಲ್ ಬಿಸಾಕಿದ್ದಳು

ಸಿಐಡಿ ಅಧಿಕಾರಿಗಳು ಬಂಧನದ ವೇಳೆ ಗಾಬರಿ ಬಿದ್ದು ಮಹಾರಾಷ್ಟ್ರದಲ್ಲಿ ಬಳಕೆ ಮಾಡೋದಕ್ಕೆ ಖರೀದಿ ಮಾಡಿದ್ದ ಹೊಸ ಮೊಬೈಲ್ ದಿವ್ಯಾ ಬಿಸಾಕಿದ್ದಳಂತೆ. ಆದರೆ ಅಕ್ರಮಕ್ಕೆ ಬಳಸಿದ ಹಳೆಯ ಮೊಬೈಲ್ ತನ್ನ ಬಳಿಯೇ ಇಟ್ಟುಕೊಂಡಿದ್ದಳು ಅನ್ನೋದು ಇದೀಗ ಸಿಐಡಿ ಅಧಿಕಾರಿಗಳ ತನಿಖೆಯ ವೇಳೆಯಲ್ಲಿ ಬಯಲಾಗಿದೆ.

ದಿವ್ಯಾ ಹಾಗರಗಿ ಅಕ್ರಮಕ್ಕೆ ಬಳಸಿದ್ದ ಮೊಬೈಲ್ ಪತ್ತೆಯಾದ ಹಿನ್ನೆಲೆ ಇದೀಗ ದಿವ್ಯಾ ಮೊಬೈಲ್ ನ ಜನ್ಮ ಜಾಲಾಡೋದಕ್ಕೆ ಸಿಐಡಿ ಅಧಿಕಾರಿಗಳು ಮುಂದಾಗಿದ್ದಾರೆ. ಮೊಬೈಲ್ ಪತ್ತೆಯಾದ ಹಿನ್ನೆಲೆಯಲ್ಲಿ ಅಕ್ರಮದಲ್ಲಿ ಇನ್ಯಾರ್ಯಾರು ಭಾಗಿಯಾಗಿದ್ದಾರೆ. ಜೊತೆಗೆ ದಿವ್ಯಾ ಹಾಗರಗಿ ಹಿಂದಿರುವ ದಿವ್ಯ ಶಕ್ತಿಗಳ ಬಗ್ಗೆಯು ಕೂಡ ಸಿಐಡಿ ಅಧಿಕಾರಿಗಳು ತಲಾಶ್ ನಡೆಸೋದಕ್ಕೆ ಮುಂದಾಗಿದ್ದಾರೆ.


Spread the love

About Laxminews 24x7

Check Also

ಅಸ್ಸಾಂ, ತಮಿಳುನಾಡು, ಕೇರಳಕ್ಕೆ ಏ.9 ರಂದು ಚುನಾವಣೆ – ಮೇ 4 ರಂದು ಫಲಿತಾಂಶ

Spread the loveನವದೆಹಲಿ: 4 ರಾಜ್ಯ  ಮತ್ತು 1 ಕೇಂದ್ರಾಡಳಿತ ಪ್ರದೇಶದ ಚುನಾವಣೆಗೆ ಮುಹೂರ್ತ ಫಿಕ್ಸ್‌ ಆಗಿದೆ. ಅಸ್ಸಾಂ, ತಮಿಳುನಾಡು,ಕೇರಳ, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ