ಲಖನೌ: ಕರ್ತವ್ಯ ಲೋಪ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಪೊಲೀಸ್ ಮುಖ್ಯಸ್ಥರನ್ನು ಅವರ ಹುದ್ದೆಯಿಂದ ತೆಗೆದುಹಾಕಲಾಗಿದೆ. ಕೆಲಸದಲ್ಲಿ ನಿರಾಸಕ್ತಿ, ಸರ್ಕಾರದ ಆದೇಶವನ್ನು ಪಾಲಿಸದೇ ಇದ್ದುದ್ದರಿಂದ ಹುದ್ದೆಯಿಂದ ಕೆಳಗಿಳಿಸಲಾಗಿದೆ ಎಂದು ಯೋಗಿ ಸರ್ಕಾರದ ಆದೇಶದಲ್ಲಿ ಹೇಳಿದೆ.
ಪೊಲೀಸ್ ಮಹಾನಿರ್ದೇಶಕ ಮುಕುಲ್ ಗೋಯೆಲ್ ಅವರನ್ನು ಅತ್ಯಲ್ಪ ಹುದ್ದೆಗೆ ಇಳಿಸಿದ್ದು ನಾಗರಿಕ ರಕ್ಷಣಾ ಇಲಾಖೆಯ ಮಹಾನಿರ್ದೇಶಕರನ್ನಾಗಿ ನೇಮಿಸಲಾಗಿದೆ.
1987ರ ಬ್ಯಾಚ್ ಐಪಿಎಸ್ ಅಧಿಕಾರಿ ಮುಕುಲ್ ಗೋಯೆಲ್ ಅವರು 2021ರ ಜುಲೈನಲ್ಲಿ ರಾಜ್ಯದ ಉನ್ನತ ಪೋಲೀಸ್ ಆಗಿ ಅಧಿಕಾರ ವಹಿಸಿಕೊಂಡರು. ಈ ಹಿಂದೆ ಅಲ್ಮೋರಾ, ಜಲೌನ್, ಮೈನ್‌ಪುರಿ, ಹತ್ರಾಸ್, ಅಜಂಗಢ್, ಗೋರಖ್‌ಪುರ, ವಾರಣಾಸಿ, ಸಹರಾನ್‌ಪುರ ಮತ್ತು ಮೀರತ್ ಜಿಲ್ಲೆಗಳಲ್ಲಿ ಎಸ್‌ಪಿ/ಎಸ್‌ಎಸ್‌ಪಿಯಾಗಿ ಕೆಲಸ ಮಾಡಿದ್ದರು.
ಮುಕುಲ್ ಗೋಯೆಲ್ ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲಿಸ್ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಗೆ ಸಹ ನಿಯೋಜಿಸಲ್ಪಟ್ಟಿದ್ದರು.