ಚೆನ್ನೈ: ತನ್ನ ಗಂಡನ ಮನೆಯಲ್ಲಿ ಶೌಚಾಲಯ ಇಲ್ಲದಿರುವುದಕ್ಕೆ ಮನನೊಂದ 27 ವರ್ಷದ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನ ಕಡಲೂರಿನಲ್ಲಿ ನಡೆದಿದೆ.
ಕಡಲೂರು ಜಿಲ್ಲೆಯ ಅರಿಸಿಪೆರಿಯಂಕುಪ್ಪಂ ಗ್ರಾಮದ ರಮ್ಯಾ ಆತ್ಮಹತ್ಯೆ ಶರಣಾದ ಗೃಹಿಣಿ. ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ರಮ್ಯಾ ಏಪ್ರಿಲ್ 6 ರಂದು ಕಾರ್ತಿಕೇಯನ್ ಎಂಬವರನ್ನು ವಿವಾಹವಾಗಿದ್ದರು.
ಮೂಲಗಳ ಪ್ರಕಾರ, ರಮ್ಯಾ ತನ್ನ ಗಂಡನ ಮನೆಯಲ್ಲಿ ಶೌಚಾಲಯವಿಲ್ಲದ ಕಾರಣ ಮದುವೆಯ ನಂತರ ತನ್ನ ತಾಯಿಯೊಂದಿಗೆ ವಾಸಿಸಲು ಪ್ರಾರಂಭಿಸಿದ್ದಳು. ಇದೇ ವೇಳೆ ರಾಜ್ಯದ ರಾಜಧಾನಿಗೆ ದೂರವಿರುವ ಕಡಲೂರು ನಗರದಲ್ಲಿ ಶೌಚಾಲಯವಿರುವ ಮನೆಯನ್ನು ಹುಡುಕುವಂತೆ ಪತಿಯನ್ನು ಕೇಳಿಕೊಂಡಿದ್ದರು. ಇದು ಅವರ ನಡುವೆ ವಿವಾದಕ್ಕೆ ಕಾರಣವಾಗಿದೆ ಎನ್ನಲಾಗಿದೆ.