Breaking News

ಬೆಳಗ್ಗಿನ ಜಾವದ ಅಝಾನ್ ಎಲ್ಲರ ನಿದ್ದೆ ಹಾಳು ಮಾಡುತ್ತದೆ.: ಚಕ್ರವರ್ತಿ ಸೂಲಿಬೆಲೆ,

Spread the love

ಮಂಗಳೂರು : ಪ್ರತಿ ನಾಗರಿಕನಿಗೆ ತೊಂದರೆಯಾಗದಂತೆ ನೋಡಿಕೊಳ್ಳೋದು ಸರ್ಕಾರದ ಜಬಾವ್ದಾರಿ. ಆದರೆ ದುರಾದೃಷ್ಟವಶಾತ್ ಸರ್ಕಾರ ಮುಂದೆ ಎಷ್ಟೇ ಮೊರೆ ಹೋದರೂ ಇದು ಸಾಧ್ಯವಾಗಿಲ್ಲ ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ, ರಾಜ್ಯದಲ್ಲಿ ಆಝಾನ್ ವಿರುದ್ಧ ಸುಪ್ರಭಾತ ಅಭಿಯಾನದ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.

 

 ಬೆಳಗ್ಗಿನ ಅಜಾನ್ ಜಾತ್ಯಾತೀತ ರಾಷ್ಟ್ರಕ್ಕೆ ಹೇಳಿ ಮಾಡಿಸಿರೋದು ಅಲ್ಲ. ಅಲ್ಲಾ ಒಬ್ಬನೇ. ದೇವರು ಬೇರೆ ಯಾರೂ ದೇವರಿಲ್ಲ ಅನ್ನೋದನ್ನು ಪ್ರತಿಯೊಬ್ಬ ಹಿಂದೂ ಕೇಳೋಕೆ ಸಾಧ್ಯ ಇಲ್ಲ. ಬೆಳಗ್ಗಿನ ಜಾವದ ಅಝಾನ್ ಎಲ್ಲರ ನಿದ್ದೆ ಹಾಳು ಮಾಡುತ್ತದೆ. ಇದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಆದೇಶ ಕೂಡಾ ಇದೆ. ಆದರೆ ಕರ್ನಾಟಕ ಸರ್ಕಾರ ಸುದೀರ್ಘ ನಿದ್ರೆಯಲ್ಲಿದೆ. ಸರ್ಕಾರಕ್ಕೆ ಎಷ್ಟೇ ಒತ್ತಡ ಹಾಕಿದರೂ ಬೆಳಗ್ಗಿನ ಆಝಾನ್ ಧ್ವನಿ ನಿಲ್ಲಿಸುವ ಪ್ರಯತ್ನ ಮಾಡುತ್ತಿಲ್ಲ ಎಂದರು.


Spread the love

About Laxminews 24x7

Check Also

ದಂಪತಿ ಮಲಗಿದ್ದಲ್ಲೇ ಅನುಮಾನಾಸ್ಪದ ಸಾವು; ಮನೆ, ಮೈಮೇಲಿದ್ದ ಚಿನ್ನಾಭರಣ ಕಳವು

Spread the love ಶಿವಮೊಗ್ಗ: ಜಿಲ್ಲೆಯ ಭದ್ರಾವತಿ ಪಟ್ಟಣದ ಭೂತನಗುಡಿ ನಿವಾಸಿಗಳಾದ ಚಂದ್ರಪ್ಪ(80) ಹಾಗೂ ಪತ್ನಿ ಜಯಮ್ಮ(70) ದಂಪತಿಗಳಿಬ್ಬರು ಮನೆಯಲ್ಲಿಯೇ ಅನುಮಾನಾಸ್ಪದವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ