ಮೈಸೂರು: ಮದರಸಾಗಳಲ್ಲಿ ಅಪ್ರಾಪ್ತರಿಗೆ ಕೊಲೆಯ ತರಬೇತಿ ನೀಡಲಾಗುತ್ತಿದೆ. ಹಾಗಾಗಿ ಮೊದಲು ಕರ್ನಾಟಕ ಸರ್ಕಾರ ಮದರಾಸ ಬ್ಯಾನ್ ಮಾಡಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಹಿಂದೂ ಮುಖಂಡರ ಹತ್ಯೆಯ ಪ್ಲಾನ್ ವಿಚಾರದ ಬಗ್ಗೆ ಮೈಸೂರಿನಲ್ಲಿ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಮುಸ್ಲಿಮರ ಅಬ್ಬರ ಅಟ್ಟಹಾಸ ಹೆಚ್ಚಾಗತ್ತಿದೆ. ಕೊಲೆ, ಗಲಾಟೆ ಮಾಡುತ್ತಿರುವವರು ಹಿಂದೂಗಳಲ್ಲ. ಮೈಸೂರಿನ ‘ಕವಲಂದೆಯಲ್ಲಿ ಛೋಟಾ ಪಾಕಿಸ್ತಾನ್ ಅಂತ ಘೋಷಣೆ ಕೂಗಿದ್ದು, ಹುಬ್ಬಳ್ಳಿಯಲ್ಲಿ ದೇವಾಲಯದ ಮೇಲೆ ಕಲ್ಲೂತೂರಾಟ ನಡೆಸಿ ಹಲ್ಲೆ ನಡೆಸಿದ್ದೂ ಹಿಂದೂಗಳಲ್ಲ. ಹಿಂದೂಗಳಿಂದ ಯಾವುದೇ ತೊಂದರೆಯಾಗುತ್ತಿಲ್ಲ.
ಆದರೆ ನೀವು ದೇಶದ್ರೋಹಿ, ಸಮಾಜ ಕಂಟಕ, ಕಾನೂನು ಬಾಹಿರ ಚಟುವಟಿಕೆಗಳನ್ನು ಮಾಡುತ್ತಿದ್ದೀರಾ. ಹಾಗಾಗಿ ನೀವು ಮಾಡುತ್ತಿರುವ ಕುತಂತ್ರ, ಅಟ್ಟಹಾಸದಿಂದ ಹಿಂದೂಗಳು ಎಚ್ಚರಗೊಂಡು ಇದಕ್ಕೆ ಪ್ರತಿಕ್ರಿಯಿಸಬೇಕಾಗುತ್ತದೆ.
ಇಲ್ಲಿಯವರೆಗೂ ಯಾವುದೇ ಹಿಂದೂ ಅಶಾಂತಿಯನ್ನು ಸೃಷ್ಟಿಸುವಂತಹ ಯಾವುದೇ ಕೆಲಸಗಳನ್ನು ಮಾಡಿಲ್ಲ, ಮಾಡುವುದು ಇಲ್ಲ ಎಂದಿದ್ದಾರೆ.ಮದರಸಾಗಳಲ್ಲಿ ಅಪ್ರಾಪ್ತರಿಗೆ ಕೊಲೆಯ ತರಬೇತಿ ನೀಡಲಾಗುತ್ತಿದೆ.