ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷಿತ ಚಿತ್ರ `ವಿಕ್ರಾಂತ್ ರೋಣ’ ರಿಲೀಸ್‌ಗೆ ರೆಡಿಯಿದೆ. ಬಿಡುಗಡೆಯ ಮುನ್ನವೇ ಸುದೀಪ್ ಸಿನಿಮಾ ದಾಖಲೆ ಮಾಡಿದೆ. ವಿದೇಶದ ವಿತರಕರು `ವಿಕ್ರಾಂತ್ ರೋಣ’ ಚಿತ್ರದ ಹಕ್ಕುಗಳನ್ನ ಭಾರೀ ಮೊತ್ತಕ್ಕೆ ಖರೀದಿ ಮಾಡಿದ್ದಾರೆ.
ಇದೀಗ ಹೊರ ರಾಜ್ಯ, ಹೊರ ದೇಶ ಎಲ್ಲಾ ಕಡೆ ಕನ್ನಡ ಸಿನಿಮಾಗಳು ಸದ್ದು ಮಾಡುತ್ತಿದೆ. `ಕೆಜಿಎಫ್ 2′ ಭರ್ಜರಿ ಸಕ್ಸಸ್ ನಂತರ ಕನ್ನಡದ `ವಿಕ್ರಾಂತ್ ರೋಣ’ ಸಿನಿಮಾಗೆ ವಿದೇಶದ ವಿತರಕರು ಮಣೆ ಹಾಕಿದ್ದಾರೆ. ಇನ್ನು ರಿಲೀಸ್‌ಗೂ ಮುನ್ನವೇ ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಚಿತ್ರದ ಹಕ್ಕನ್ನು ಭಾರೀ ಮೊತ್ತಕ್ಕೆ ಖರೀದಿಸಿದ್ದಾರೆ ಎಂಬ ಮಾಹಿತಿ ಕೇಳಿ ಬಂದಿದೆ.
ವಿದೇಶಿ ಮಾರುಕಟ್ಟೆಯ `ವಿಕ್ರಾಂತ್ ರೋಣ’ ಚಿತ್ರದ ಹಕ್ಕುಗಳನ್ನು `ಒನ್ ಟ್ವೆಂಟಿ 8 ಮೀಡಿಯಾ’ ಭಾರಿ ಮೊತ್ತಕ್ಕೆ ಪಡೆದುಕೊಂಡಿದೆ. ಇದೇ ಮೊದಲ ಬಾರಿಗೆ ಕನ್ನಡ ಚಿತ್ರವೊಂದರ ವಿದೇಶಿ ಹಕ್ಕುಗಳು ಬಿಡುಗಡೆಗೂ ಮುನ್ನವೇ ದಾಖಲೆ ಮೊತ್ತಕ್ಕೆ ಮಾರಾಟವಾಗಿದೆ. ರಿಲೀಸ್‌ಗೂ ಮುಂಚೆನೇ ಚಿತ್ರ ಈ ಮಟ್ಟಿಗೆ ಹವಾ ಕ್ರಿಯೇಟ್ ಮಾಡಿರೋದು ಚಿತ್ರತಂಡಕ್ಕೆ ಖುಷಿಕೊಟ್ಟಿದೆ.