ಚಿಕ್ಕೋಡಿ: ದೇವಸ್ಥಾನ ಕಂಪೌಂಡ್ ಗೋಡೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪಿಎಸ್‍ಐ ಹಾಗೂ ಶಿಕ್ಷಕನೋರ್ವನ ಮಧ್ಯೆ ಗಲಾಟೆ ಆಗಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದಲ್ಲಿ ನಡೆದಿದೆ.
ಮುಗಳಖೋಡ ಪಟ್ಟಣದ ದುರ್ಗಾದೇವಿ ಸೇವಾಲಾಲ್ ದೇವಸ್ಥಾಕ್ಕೆ ಕಂಪೌಂಡ್ ನಿರ್ಮಾಣ ಮಾಡುವ ವಿಚಾರವಾಗಿ ಜಗಳ ನಡೆದಿದೆ. ಹಾರೂಗೇರಿ ಪಿಎಸ್‍ಐ ರಾಘವೇಂದ್ರ ಖೋತ್ ಹಾಗೂ ಶಿಕ್ಷಕ ಚಂದ್ರು ಲಮಾಣಿ ಮಧ್ಯೆ ವಾಗ್ವಾದ ನಡೆದಿದೆ. ದುರ್ಗಾದೇವಿ ಸೇವಾಲಾಲ್ ದೇವಸ್ಥಾಕ್ಕೆ ಕಂಪೌಂಡ್ ನಿರ್ಮಾಣ ಮಾಡಲು ಪುರಸಭೆ ಅಧಿಕಾರಿಗಳು ತಯಾರಿ ನಡೆಸಿದ್ದರು.

ಶಿಕ್ಷಕ ಚಂದ್ರು ಲಮಾಣಿ ಇದನ್ನು ವಿರೋಧಿಸಿದ ಕಾರಣ ಪುರಸಭೆ ಅಧಿಕಾರಿಗಳು ಪೊಲೀಸರ ಮೊರೆ ಹೋಗಿದ್ದರು. ಪುರಸಭೆ ಅಧಿಕಾರಿಗಳ ದೂರಿನನ್ವಯ ಸ್ಥಳ ಪರಿಶೀಲನೆ ಮಾಡಲು ಹೋಗಿದ್ದ ಸಂದರ್ಭದಲ್ಲಿ ಈ ಗಲಾಟೆ ನಡೆದಿದೆ.
Laxmi News 24×7