ಬೆಂಗಳೂರು, ಮೇ. 01: ಈ ಹಿಂದೆ ಸಿಎಂ ಅಭ್ಯರ್ಥಿ ಎಂದೇ ಬಿಂಬಿತವಾಗಿದ್ದ ಬಿಜೆಪಿ ಹಿರಿಯ ನಾಯಕ ಅರವಿಂದ್ ಬೆಲ್ಲದ್ ಅವರಿಗೆ ರಾಜ್ಯ ಬಿಜೆಪಿ ಅಧ್ಯಕ್ಷ ಒಟ್ಟ ಒಲಿಯುವ ಸಾಧ್ಯತೆ. ಬೆಲ್ಲದ್ ಬಿಜೆಪಿ ರಾಜ್ಯಾಧ್ಯಕ್ಷರಾದರೆ ಸಿಎಂ ಹುದ್ದೆಯಿಂದ ಬೊಮ್ಮಾಯಿ ಅವರನ್ನು ಇಳಿಸಿ ಒಕ್ಕಲಿಗ ಸಮುದಾಯದ ನಾಯಕರೊಬ್ಬರನ್ನು ಸಿಎಂ ಖುರ್ಚಿಯಲ್ಲಿ ಕೂರಿಸಲಾಗುತ್ತದೆ!
ಇದು ರಾಜಕೀಯ ಪಡಸಾಲೆಯಲ್ಲಿ ಬಲವಾಗಿ ಕೇಳಿ ಬರುತ್ತಿರುವ ಸುದ್ದಿ.
ಬಿಜೆಪಿ ಪಕ್ಷದಲ್ಲಿ ಎರಡು ದಿನದಿಂದ ಬಹು ಚರ್ಚಿತ ಸಂಗತಿಗಳಿವು. ರಾಜ್ಯದಲ್ಲಿ ಸಂಪುಟ ಬದಲಾವಣೆ ಅಲ್ಲ, ಸಿಎಂ ಬದಲಾವಣೆ ಆಗುವ ಸಾಧ್ಯತೆಗಳಿವೆ ಎಂದೇ ಹೇಳಲಾಗುತ್ತಿದೆ. ಅಧಿಕಾರ ಮತ್ತು ಪಕ್ಷದ ವಿಚಾರ ಬಂದರೆ ಬಿಜೆಪಿ ವರಿಷ್ಠರು ಅನಿರಿಕ್ಷಿತ ಅಚ್ಚರಿ ನಿರ್ಣಯ ಕೈಗೊಂಡಿರುವ ಸಾಕಷ್ಟು ಉದಾರಣೆಗಳಿವೆ. ಯಡಿಯೂರಪ್ಪ ಅವರನ್ನು ಸಿಎಂ ಖುರ್ಚಿಯಿಂದ ಕೆಳಗಿಸಿ ಬೊಮ್ಮಾಯಿಯನ್ನು ಸಿಎಂ ಮಾಡಿದ್ದು ಹೈಕಮಾಂಡ್ ಅಚ್ಚರಿ ನಿರ್ಣಯವೇ. ಅಂತಹ ಮತ್ತೊಂದು ನಿರ್ಣಯ ಶೀಘ್ರದಲ್ಲಿ ಹೊರ ಬಳಲಿದೆ. ಹೈಕಮಾಂಡ್ ಈ ನಿರ್ಣಯದಿಂದ ಬಿಜೆಪಿ ಪಕ್ಷದಲ್ಲಿ ಬದಲಾವಣೆಯಾಗಲಿವೆ.