ಹಾಸನ: ಬೇಲೂರು ಚನ್ನಕೇಶವ ಸ್ವಾಮಿ ಜಾತ್ರಾ ಮಹೋತ್ಸವದ ಗಳಿಗೆ ತೇರಿನ ದಿನ ರಥ ಎಳೆಯುವ ಮುನ್ನ ಕುರಾನ್ ಪಠಣ ಮಾಡುವುದಕ್ಕೆ ಪ್ರಮೋದ್ ಮುತಾಲಿಕ್ ವಿರೋಧ ವ್ಯಕ್ತಪಡಿಸಿದ್ದು ಬೇಲೂರು ರಥೋತ್ಸವಕ್ಕೂ ಕುರಾನ್‍ಗೂ ಏನು ಸಂಬಂಧ ಎಂದು ಪ್ರಶ್ನಿಸಿದ್ದಾರೆ.
ಶ್ರೀರಾಮಸೇನೆ ಬೇಲೂರು ತಾಲೂಕು ಘಟಕ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೇಲೂರು ರಥೋತ್ಸವಕ್ಕೂ ಕುರಾನ್‍ಗೂ ಏನು ಸಂಬಂಧ? ಮುಜರಾಯಿ ಖಾತೆ ಸಚಿವೆ ಶಶಿಕಲಾ ಜೊಲ್ಲೆಯವರಿಗೆ ಎಚ್ಚರಿಕೆ ಕೊಡುತ್ತಿದ್ದೇನೆ. ಮುಂದಿನ ವರ್ಷ ಗಳಿಗೆ ತೇರಿಗೂ ಮುನ್ನ ಕುರಾನ್ ಪಠಣ ಮಾಡಲು ಹೋದರೆ, ಶ್ರೀರಾಮಸೇನೆಯಿಂದ ಪ್ರತಿಭಟನೆ ಎದುರಿಸಬೇಕಾಗುತ್ತದೆ.
ಈ ವರ್ಷ ಶ್ರೀರಾಮಸೇನೆ ಸಂಘಟನೆ ಬೇಲೂರಿನಲ್ಲಿ ಇರಲಿಲ್ಲ, ತಾಕತ್ತಿದ್ದರೆ ಮುಂದಿನ ವರ್ಷ ಕುರಾನ್ ಪಠಣ ಮಾಡಿ ನೋಡೋಣ, ಕೂಡಲೇ ಇದನ್ನು ವಾಪಾಸ್ ಪಡೆಯಬೇಕು. ಇಲ್ಲವಾದಲ್ಲಿ ಸಂಘರ್ಷ, ಗಲಾಟೆ, ಗಲಭೆಗಳು ಆಗ್ತವೆ, ಬೆಂಕಿ ಹೊತ್ತಿಕೊಳ್ಳುತ್ತೆ ಎಂದು ಎಚ್ಚರಿಕೆ ನೀಡಿದರು.
Laxmi News 24×7