ವಿಜಯನಗರ: ರಾಜ್ಯದಲ್ಲಿ ಲಿಂಗ ಪರಿವರ್ತನೆ ಮಾಡುವ ಜಾಲ ಸಕ್ರಿಯವಾಗಿದೆಯಾ ಎಂಬ ಪ್ರಶ್ನೆ ಮೂಡಿದೆ. ಮಂಗಳಮುಖಿಯರ ಹುಚ್ಚಾಟಕ್ಕೆ ಹೂವಿನ ಹಡಗಲಿ ತಾಲೂಕಿನ ಗ್ರಾಮವೊಂದರ ಯುವಕ ಹೈರಾಣಾಗಿರುವ ಘಟನೆ ನಡೆದಿದೆ.
ಹಳ್ಳಿಯಲ್ಲಿ ಕೆಲಸಕ್ಕಾಗಿ ಪರದಾಡೋ ಹುಡುಗರನ್ನು ಟಾರ್ಗೆಟ್ ಮಾಡ್ತಾರಂತೆ ಈ ಮಂಗಳ ಮುಖಿಯರು?
ಕೆಲಸ ಕೊಡಿಸುವುದಾಗಿ ನಂಬಿಸಿ ಕರೆದುಕೊಂಡು ಹೋಗಿ ಲಿಂಗಪರಿವರ್ತನೆ ಮಾಡಿ ಭಿಕ್ಷಾಟನೆಗೆ ಕಳುಹಿಸುತ್ತಾರೆಂಬ ಆರೋಪ ಕೇಳಿಬಂದಿದೆ.
ಇದೇ ರೀತಿ ಕೆಲಸ ಕೊಡಿಸುವುದಾಗಿ 19 ವರ್ಷದ ಹಡಗಲಿ ತಾಲೂಕಿನ ಗ್ರಾಮವೊಂದರ ಯುವಕನನ್ನು ಕರೆದುಕೊಂಡು ಹೋಗಿದ್ದಾರೆ ಎಂದು ಹೇಳಲಾಗಿದೆ. ಕೆಲಸವಿಲ್ಲದೇ ಊರಲ್ಲಿ ಸಣ್ಣಪುಟ್ಟ ಟೈಲರಿಂಗ್ ಕೆಲಸ ಮಾಡುತ್ತಿದ್ದ ಯುವಕ ತೃತಿಯ ಲಿಂಗಿಯರ ಹಿಂದೆ ಹೋಗಿದ್ದಾನೆ ಎನ್ನಲಾಗಿದೆ.
ಮೊದಲು ಹೋಗುವುದಾಗಿ ಒಪ್ಪಿದ ಯುವಕ ನಂತರ ಬೇಡವೆನ್ನುವ ನಿರ್ಧಾರಕ್ಕೆ ಬಂದ್ರೂ ಬಲವಂತವಾಗಿ ಬಿಡದೇ ಕರೆದುಕೊಂಡು ಹೋಗಿದ್ದಾರೆ. ಲಿಂಗಪರಿವರ್ತನೆ ಕುರಿತು ಮಂಗಳ ಮುಖಿಯರು ಮಾತನಾಡುವ ವೇಳೆ ಯುವಕ ತಪ್ಪಿಸಿಕೊಂಡು ಬಂದಿದ್ದಾನೆ. ನಾಪತ್ತೆಯಾಗಿದ್ದ ಯುವಕ ತಪ್ಪಿಸಿಕೊಂಡು ಬಂದ ಮೇಲೆ ಪೊಲೀಸರಿಗೆ ವಿವರಣೆ ನೀಡಿದ್ದಾನೆ ಎನ್ನಲಾಗಿದೆ.
ಮರ್ಯಾದೆಗೆ ಅಂಜಿದ ಕುಟುಂಬ ಯಾವ ಮಾಹಿತಿ ನೀಡದೇ ಎಲ್ಲವನ್ನೂ ಮುಚ್ಚಿಟ್ಟಿತ್ತು. ಅಲ್ಲಿಂದ ಬಂದ ಮೇಲೆ ನಮಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ನಾವು ಸಮಗ್ರ ತನಿಖೆ ಕೈಗೊಳ್ಳುತ್ತೇವೆ ಎಂದು ವಿಜಯನಗರ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.