ನವದೆಹಲಿ,ಸೆ.2-ಚೆನ್ನೈ ಸೂಪರ್ ಕಿಂಗ್ಸ್ ಕ್ಯಾಂಪ್‍ನಲ್ಲಿ ಮತ್ತೆ ನಾನು ಕಾಣಿಸಿಕೊಳ್ಳುತ್ತೇನೆ. ನೀವು ನೋಡಲಿದ್ದೀರಿ ಎಂದು ಕ್ರಿಕೆಟಿಗ ಸುರೇಶ್ ರೈನಾ ಹೇಳಿ ಅಚ್ಚರಿ ಮೂಡಿಸಿದ್ದಾರೆ.
ಸಂಬಂಧಿಕರೊಬ್ಬರಿಗೆ ರಾಜಸ್ಥಾನದಲ್ಲಿ ಕುಟುಂಬ ಸದಸ್ಯರ ಮೇಲೆ ದರೋಡೆಕೋರರ ದಾಳಿ ನಡೆದ ನಂತರ ಹೇಳದೆ ಕೇಳದೆ ದುಬೈನಿಂದ ಭಾರತಕ್ಕೆ ಸುರೇಶ್ ರೈನಾ ವಾಪಸ್ಸಾಗಿದ್ದರು.
ಇದಾದ ನಂತರ ದುಬೈನಲ್ಲಿ ಸಿಎಸ್‍ಕೆ ತಂಡದ ಆಟಗಾರರಿಗೆ ನೀಡಿದ್ದ ಹೋಟೆಲ್ ರೂಮ್ ಬಗ್ಗೆ ಸುರೇಶ್ ರೈನಾ ತಮ್ಮ ಆತಿಥ್ಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಜಗಳವಾಡಿದ್ದರು ಎಂಬ ಮಾಹಿತಿ ಹರಿರದಾಡಿತ್ತು.
ಸ್ವತಃ ಸಿಎಸ್‍ಕೆಯ ಮಾಲೀಕ ಶ್ರೀನಿವಾಸನ್ ಕೂಡ ತಂಡವನ್ನು ತೊರೆದಿರುವುದರಿಂದ ರೈನಾಗೆ ನಷ್ಟ, ನಮಗೇನು ಆಗೊಲ್ಲ ಎಂದು ಹೇಳಿದ್ದರು. ಈ ಎಲ್ಲಾ ಸುದ್ದಿಗಳು ಹರಿದಾಡುತ್ತಿದ್ದರೂ ಮೌನವಾಗಿದ್ದ ರೈನಾ ಇಂದು ದಿಢೀರ್‍ನೆ ಮಾಧ್ಯಮಗಳ ಮುಂದೆ ಹಾಜರಾಗಿ ಸಿಎಸ್‍ಕೆ ತಂಡದಲ್ಲಿ ನಾನು ಕಾಣಿಸಿಕೊಳ್ಳುವುದನ್ನು ನೀವು ನೋಡುತ್ತಿರೀ ಎಂಬುದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.ಸಿಎಸ್‍ಕೆ ನನಗೆ ಕುಟುಂಬವಿದ್ದಂತೆ.
ಇದಲ್ಲದೆ ಮಹೇಂದ್ರ ಸಿಂಗ್ ಧೋನಿ ಅವರ ಬಗ್ಗೆ ಅಪಾರ ಗೌರವವಿದೆ. ಕುಟುಂಬದ ವಿಷಯ ಬಂದಾಗ ತುರ್ತಾಗಿ ಸ್ಪಂದಿಸುವ ಅಗತ್ಯವಿತ್ತು ಅದಕ್ಕಾಗಿ ತೆರಳಿದ್ದೆ. ಬೆರೆಲ್ಲ ವಿಷಯಗಳು ಇಲ್ಲಿ ನಗಣ್ಯ ಎಂದು ಹೇಳಿದ್ದಾರೆ.