Breaking News

ನಾನು ನಿತ್ಯಾ ಮೆನನ್​ರನ್ನು ಮದ್ವೆ ಆಗಲ್ಲ, ಒಂದಲ್ಲ ಒಂದು ದಿನ ಆಕೆ ಪಶ್ಚಾತಾಪ ಪಟ್ಟೆ ಪಡುತ್ತಾಳೆ

Spread the love

ಕೊಚ್ಚಿ: ಮೋಹನ್ ​ಲಾಲ್​ ಅಭಿಮಾನಿಯೊಬ್ಬ ನಟಿ ನಿತ್ಯಾ ಮೆನನ್​ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಕಾಮೆಂಟ್ ಇದೀಗ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ಅಭಿಮಾನಿ ಸಂತೋಷ್​ ವಾರ್ಕಿ, ನಿತ್ಯಾ ಮೆನನ್​ ಅವರನ್ನು ತುಂಬಾ ಇಷ್ಟ ಪಡುತ್ತಿದ್ದಾರೆ.

ಹಿಂದೊಮ್ಮೆ ಮದುವೆ ಆಗಲು ಅನುಮತಿ ಕೇಳಲು ಆಕೆಯ ಮನೆಗೆ ಹೋಗಿದ್ದರಂತೆ. ಇದೀಗ ನಿತ್ಯಾ ಬಗ್ಗೆ ಸಂತೋಷ್​ ಮತ್ತೊಂದು ಫೇಸ್​ಬುಕ್​ ಪೋಸ್ಟ್​ ಮಾಡಿದ್ದಾರೆ. ​

ಇದುವರೆಗೂ ಮದುವೆ ಆಗುತ್ತೇನೆ ಅಂತಿದ್ದ ಸಂತೋಷ್​ ಇದೀಗ ನಿತ್ಯಾ ವಿರುದ್ಧ ಕೆಂಡಾಮಂಡಲರಾಗಿದ್ದಾರೆ. ನಾನು ಇನ್ನೆಂದಿಗೂ ನಿತ್ಯಾ ಮೆನನ್​ ಅವರನ್ನು ಮದುವೆ ಆಗುವುದಿಲ್ಲ ಎಂದಿದ್ದಾರೆ. ನಿತ್ಯಾ ಅವರೇ ನನ್ನ ಬಳಿ ಬಂದು ಮದುವೆ ಆಗು ಅಂತಾ ಕೇಳಿದರೆ ನಾನು ಮದುವೆ ಆಗದಿರಲು ನಿರ್ಧಾರ ಮಾಡಿದ್ದೇನೆ. ಅವರು ಒಳ್ಳೆಯ ವ್ಯಕ್ತಿಯಾಗಿದ್ದರೆ, ಅವರು ತಮ್ಮ ಮೊಬೈಲ್​ ನಂಬರ್​ ಅನ್ನು ಕೊಡಬಹುದಿತ್ತು ಎಂದು ಫೇಸ್​ಬುಕ್​ ಪೋಸ್ಟ್​ ಮಾಡಿದ್ದಾರೆ.

ಸಂತೋಷ್​ ಅವರಿಗೆ ಈಗ ನಿತ್ಯಾ ಮೆನನ್ ಜತೆ ಮದುವೆಯಾಗುವ ಆಸಕ್ತಿ ಇಲ್ಲ. ಅದಕ್ಕಾಗಿ ಅವರು ತಮ್ಮ ಸಮಯ ಮತ್ತು ಶಕ್ತಿಯನ್ನು ವ್ಯರ್ಥ ಮಾಡಿದ್ದಾಗಿ ಪಶ್ಚಾತಾಪ ಪಡುತ್ತಿದ್ದಾರಂತೆ. ಚಿತ್ರ ಜಗತ್ತು ಹೃದಯಹೀನವಾಗಿದೆ ಮತ್ತು ಜನರು ಪರಸ್ಪರ ದ್ರೋಹ ಮಾಡುತ್ತಾರೆ ಎಂದು ಸಂತೋಷ್​ ಅವರ ಪೋಸ್ಟ್ ಹೇಳುತ್ತದೆ. ತನ್ನ ನಿಜವಾದ ಪ್ರೀತಿಯನ್ನು ಅರಿತುಕೊಳ್ಳದ ನಿತ್ಯಾ ಒಂದಲ್ಲ ಒಮ್ಮೆ ಪಶ್ಚಾತ್ತಾಪ ಪಡುತ್ತಾಳೆ. ಅವಳು ನನಗೆ ಅರ್ಹಳಲ್ಲ ಎಂದು ಪೋಸ್ಟ್ ಮೂಲಕ ನಿತ್ಯಾರನ್ನು ಸಂತೋಷ್​ ಟೀಕಿಸಿದ್ದಾರೆ.


Spread the love

About Laxminews 24x7

Check Also

ಬ್ರಹ್ಮಕುಮಾರಿಸ್ ಜಾಗತಿಕ ಶೃಂಗ ಸಭೆಯಲ್ಲಿ ಖಾನಾಪೂರ ಶಾಸಕ ವಿಠ್ಠಲ ಹಲಗೇಕರ ಅವರು ಭಾಗಿ

Spread the love ಬ್ರಹ್ಮಕುಮಾರಿಸ್ ಜಾಗತಿಕ ಶೃಂಗ ಸಭೆಯಲ್ಲಿ ಖಾನಾಪೂರ ಶಾಸಕ ವಿಠ್ಠಲ ಹಲಗೇಕರ ಅವರು ಭಾಗಿ  -ಖಾನಾಪೂರದ ಶಾಸಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ