ಸಿಂಬು ಒಡೆತನದ ಕಾರು ಅಪಘಾತಕ್ಕೆ ಒಳಗಾಗಿ 70 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ. ಸಿಂಬು ತಂದೆ ಟಿ. ರಾಜೇಂದರ್ ಅವರ ಕಾರು ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.ಸೆಲೆಬ್ರಿಟಿಗಳ ಕಾರು ಅಪಘಾತಕ್ಕೆ ಜನಸಾಮಾನ್ಯರು ಬಲಿ ಆದ ಘಟನೆಗಳು ಪದೇಪದೇ ಮರುಕಳಿಸುತ್ತಲೇ ಇವೆ.
ಈಗ ಖ್ಯಾತ ಕಾಲಿವುಡ್ ನಟ ಸಿಂಬು (Actor Simbu) ಅವರ ಕಾರು ಅಪಘಾತಕ್ಕೆ ಒಳಗಾಗಿದೆ. ಮಾ.18ರಂದು ಈ ಘಟನೆ ನೆಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ತಮಿಳು ಚಿತ್ರರಂಗದಲ್ಲಿ ಸಿಂಬು (Silambarasan) ಅವರು ತುಂಬ ಫೇಮಸ್ ಆಗಿದ್ದಾರೆ. ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಅವರು ಕಳೆದ ವರ್ಷ ‘ಮಾನಾಡು’ ಸಿನಿಮಾದ ಯಶಸ್ಸಿನಿಂದ ಖುಷಿ ಆಗಿದ್ದರು. ಈಗ ಅವರು ಸಂಕಷ್ಟದಲ್ಲಿ ಸಿಲುಕಿದ್ದಾರೆ.ಸಿಂಬುಹೆಸರಿನಲ್ಲಿ ನೋಂದಣಿ ಆಗಿರುವ ಕಾರು ಅಪಘಾತಕ್ಕೆ ಈಡಾಗಿದ್ದು, ಈ ಆಯಕ್ಸಿಡೆಂಟ್ನಲ್ಲಿ 70 ವರ್ಷದ ವ್ಯಕ್ತಿ ಮೃತರಾಗಿದ್ದಾರೆ. ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಘಟನೆಯ ವಿವರಗಳು ಹೊರಬರಲಾರಂಭಿಸಿವೆ. ಅಪಘಾತಕ್ಕೆ (Simbu Car Accident) ಸಂಬಂಧಿಸಿದಂತೆ ಕಾರು ಚಾಲಕನನ್ನು ಬಂಧಿಸಲಾಗಿದೆ. ಇನ್ನಷ್ಟು ವಿವರಗಳು ಬಹಿರಂಗ ಆಗಬೇಕಿದೆ. ನಿಧನರಾದ ವ್ಯಕ್ತಿಯನ್ನು ಮುನುಸ್ವಾಮಿ ಎಂದು ಗುರುತಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.