Breaking News

ಪರೀಕ್ಷೆ ಇಲ್ಲದೇ ರೈಲ್ವೆಯಲ್ಲಿ ಉದ್ಯೋಗ ಕೊಡಿಸುವುದಾಗಿ 100 ಜನರಿಗೆ ಮೋಸ: ಇಬ್ಬರು ಅರೆಸ್ಟ್​

Spread the love

ಹೈದರಾಬಾದ್​ (ತೆಲಂಗಾಣ): ರೈಲ್ವೆ ಇಲಾಖೆಯಲ್ಲಿ ನೌಕರಿ ಕೊಡಿಸುವುದಾಗಿ ಉದ್ಯೋಗಾಕಾಂಕ್ಷಿಗಳಿಂದ 10 ಕೋಟಿ ರೂ.ಗೂ ಅಧಿಕ ಹಣ ಪಡೆದು ವಂಚಿಸಿದ್ದ ಇಬ್ಬರು ಆರೋಪಿಗಳನ್ನು ಹೈದರಾಬಾದ್​ನ ರಾಚಕೊಂಡ ಪೊಲೀಸ್​ ಆಯುಕ್ತಾಲಯದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪೆನಗೊಂಡ ಮೂಲದ ಪೊನ್ನಾಲ ಭಾಸ್ಕರ್​ ಮತ್ತು ಸಿಕಂದರಾಬಾದ್​ನ ವ್ಯಾಪಾರಿ ರಿತೇಶ್​ ಬಂಧಿತ ಆರೋಪಿಗಳು. ಇದರಲ್ಲಿ ಪ್ರಮುಖ ಆರೋಪಿಯಾದ ಭಾಸ್ಕರ್​​ ಸುಮಾರು 100 ಜನ ಉದ್ಯೋಗಾಕಾಂಕ್ಷಿಗಳಿಂದ ಅಂದಾಜು 10 ಕೋಟಿ ರೂ. ಪಡೆದು ಮೋಸ ಮಾಡಿದ್ದಾನೆ. ಪ್ರತಿಯೊಬ್ಬ ಅಭ್ಯಥಿಯಿಂದಲೂ ತಲಾ 10 ಲಕ್ಷ ರೂ. ಪಡೆಯಲಾಗುತ್ತಿತ್ತು ಎನ್ನಲಾಗ್ತಿದೆ.

ರೈಲ್ವೆ ಗುತ್ತಿಗೆ ಕೆಲಸಗಳಿಗೆ ಸಂಬಂಧಿಸಿದಂತೆ ಬಾಕಿ ಬಿಲ್​​ಗಳ ಹಣ ಕೊಡಿಸುವ ಮೂಲಕ ಗುತ್ತಿಗೆದಾರರಿಂದ ಕಮಿಷನ್​ ಪಡೆಯುವುದನ್ನು ಆರೋಪಿ ಭಾಸ್ಕರ್ ಮಾಡುತ್ತಿದ್ದ. ಇದರಿಂದ ದೆಹಲಿಯಲ್ಲಿನ ರೈಲ್ವೆ ಅಧಿಕಾರಿಗಳೊಂದಿಗೆ ಈತನಿಗೆ ಸಂಪರ್ಕ ಬೆಳೆದಿತ್ತು. ಇದನ್ನೇ ಬಂಡವಾಳ ಮಾಡಿಕೊಂಡು ಲಿಖಿತ ಪರೀಕ್ಷೆಗಳು ಇಲ್ಲದೇ ರೈಲ್ವೆಯಲ್ಲಿ ಉದ್ಯೋಗ ಕೊಡಿಸುವುದಾಗಿ ಹೇಳಿ ಯುವಕರಿಂದ ಹಣ ಪಡೆಯುತ್ತಿದ್ದ ಎಂದು ರಾಚಕೊಂಡ ಪೊಲೀಸ್​ ಆಯುಕ್ತ ಮಹೇಶ ಭಾಗವತ್​ ತಿಳಿಸಿದ್ದಾರೆ.


Spread the love

About Laxminews 24x7

Check Also

ವಿಮಾನ ಪ್ರಯಾಣಿಕರಿಗೆ ಸೂಚನೆ: ಬೋರ್ಡಿಂಗ್​ಗೆ ಕನಿಷ್ಠ 3 ಗಂಟೆ ಮುಂಚೆ ಏರ್​ಪೋರ್ಟ್​ನಲ್ಲಿರಿ

Spread the loveಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಯಾಣಿಸುವವರು ಇನ್ಮುಂದೆ ವಿಮಾನ ಹೊರಡುವ ಕನಿಷ್ಠ ಮೂರು ಗಂಟೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ