Breaking News

ಬೊಮ್ಮಾಯಿ ಅವರ ಚೊಚ್ಚಲ ಮಗು ಚೆನ್ನಾಗಿದೆ, ಆರೋಗ್ಯವಾಗಿದೆ.. ಹೆಚ್‌ ವಿಶ್ವನಾಥ್‌

Spread the love

ಬೆಂಗಳೂರು : ಬಜೆಟ್ ಬಗೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ಎಂಎಲ್‌ಸಿ ಹೆಚ್.ವಿಶ್ವನಾಥ್ ಅವರು, ಬೊಮ್ಮಾಯಿಯವರ ಚೊಚ್ಚಲ ಮಗು ಚೆನ್ನಾಗಿದೆ, ಆರೋಗ್ಯವಾಗಿದೆ ಎಂದು ಹೇಳಿದ್ದಾರೆ.

ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇದು ಎಲ್ಲರನ್ನೂ ಸ್ಪರ್ಶ ಮಾಡಿದ ಬಜೆಟ್ ಆಗಿದೆ. ನಮ್ಮ ಬಳಿ ಇದ್ದಾಗ ನಗುತ್ತದೆ, ಪ್ರತಿಪಕ್ಷಗಳ ಬಳಿ ಬಂದಾಗ ಕಿಟಾರನೇ ಕಿರುಚುತ್ತದೆ. ಎಷ್ಟಾದರೂ ಬಜೆಟ್ ಉತ್ತಮವಾಗಿದೆ. ರಾಜ್ಯದಲ್ಲಿ ಒಟ್ಟು 33 ಇಲಾಖೆ ಇದೆ.

ಇದರಲ್ಲಿ ಹಣಕಾಸು, ಡಿಪಿಆರ್ ಹಾಗೂ ಕಾನೂನು ಪ್ರಮುಖವಾದದು. ಸದ್ಯ ಪ್ರಮುಖ ಎರಡು ಇಲಾಖೆ ಸಿಎಂ ಬಳಿ ಇವೆ. ಇದನ್ನು ನಿಭಾಯಿಸುವ ಶಕ್ತಿ ಸಿಎಂ ಬಳಿ ಇದ್ದರೂ, ನಿಭಾಯಿಸಲು ಸಮಯ ಎಲ್ಲಿದೆ? ಸಂಪನ್ಮೂಲ ಕೊರತೆ ಇರುವಾಗ ಯಾರಿಂದ ತಾನೆ ಸಾಧನೆ ಮಾಡಲು ಸಾಧ್ಯ. ಸೈಬರ್ ನಾಯಕ ಎಸ್.ಎಂ. ಕೃಷ್ಣ ಒಬ್ಬರೇ ಸಂಪನ್ಮೂಲ ತಂದರು ಎಂದು ಹೇಳಿದ್ದಾರೆ.


Spread the love

About Laxminews 24x7

Check Also

ವಿಜಯಪುರದಲ್ಲಿ ಟ್ರ‍್ಯಾಕರ್, ಜಿಪಿಎಸ್ ಹೊಂದಿದ್ದ ರಣಹದ್ದು ಪತ್ತೆ

Spread the love ವಿಜಯಪುರ: ಜಿಲ್ಲೆಯಲ್ಲಿ ಚಡಚಣ (Chadachana) ತಾಲೂಕಿನ ಗೋಟ್ಯಾಳ ಗ್ರಾಮದ ತೋಟದಲ್ಲಿ ಟ್ರ‍್ಯಾಕರ್, ಜಿಪಿಎಸ್ ಹೊಂದಿದ್ದ ರಣಹದ್ದುವೊಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ