ಹೊಸದಿಲ್ಲಿ: ಖ್ಯಾತ ವಕೀಲ ಪ್ರಶಾಂತ್ ಭೂಷಣ್ ಅವರ ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸೋಮವಾರ ಶಿಕ್ಷೆ ವಿಧಿಸಿದೆ.
ಪ್ರಶಾಂತ್ ಭೂಷಣ ನ್ಯಾಯಾಂಗ ನಿಂದನೆ ಕೇಸ್ ಗೆ ಸುಪ್ರೀಂ ಕೋರ್ಟ್ 1 ರೂಪಾಯಿ ದಂಢ, 3 ತಿಂಗಳು ಶಿಕ್ಷೆ ವಿಧಿಸಿದೆ. ಜತೆಗೆ 3 ತಿಂಗಳು ಕೋರ್ಟ್ ನಲ್ಲಿ ವಾದ ಮಂಡಿಸಿದಂತೆ ತೀರ್ಪು ನೀಡಿದೆ.
ಈ ಹಿಂದೆ ಸುಪ್ರೀಂಕೋರ್ಟ್‌ನ ಪೀಠ ಕ್ಷಮೆ ಕೇಳಿದರೆ ಕೇಸ್ ಇತ್ಯರ್ಥಗೊಳ್ಳುವ ಸುಳಿವು ಬಿಟ್ಟುಕೊಟ್ಟಿತ್ತು. ಆದರೆ ನಾನು ಕ್ಷಮೆ ಕೋರುವುದರಿಂದ ನನ್ನ ಆತ್ಮಸಾಕ್ಷಿಗೆ ವಿರುದ್ಧ ನಡೆದುಕೊಂಡಂತಾಗುತ್ತದೆ ಎಂದು ಪ್ರಶಾಂತ್ ಹೇಳಿದ್ದರು.
ಏನಿದು ಟ್ವೀಟ್ ಪ್ರಕರಣ !
ಲಾಕ್‌ಡೌನ್ ಸಮಯದಲ್ಲಿ ಸುಪ್ರೀಂಕೋರ್ಟ್‌ನ ಮುಖ್ಯನ್ಯಾಯಮೂರ್ತಿ ಎಸ್.ಎ. ಬೋಬ್ಡೆ ತಮ್ಮ ಊರಾದ ಮಹಾರಾಷ್ಟ್ರದ ನಾಗಪುರದಲ್ಲಿದ್ದರು. ಈ ವೇಳೆ ಅವರ ನೆಚ್ಚಿನ ಬೈಕ್ ಹಾರ್ಲೆ ಡೇವಿಡ್‌ಸನ್‌ನಲ್ಲಿ ಕುಳಿತು ಪೋಸ್ ನೀಡಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಈ ಪೋಟೋವನ್ನ ವಕೀಲ ಪ್ರಶಾಂತ್ ಭೂಷಣ್ ಹಾಕಿ, ಬೈಕ್ ಮೇಲೆ ಕುಳಿತಿರುವ ಸಿಜೆ ಎಸ್.ಎ. ಬೋಬ್ಡೆ ತಲೆಗೆ ಹೆಲ್ಮೆಟ್ ಹಾಕಿಲ್ಲ.
ಸುಪ್ರೀಕೋರ್ಟ್‌ಗೆ ಬೀಗ ಹಾಕಿ ಸಿಜೆಯವರು ಬೈಕ್ ರೇಡ್ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದರು. ಇದು ಮುಖ್ಯ ನ್ಯಾಯಮೂರ್ತಿಗಳು ಹಾಗೂ ನ್ಯಾಯಾಂಗ ವ್ಯವಸ್ಥೆಯನ್ನ ನಿಂದನೆ ಮಾಡಿದಂತೆ ಆಗಿದೆ ಎಂದು ಕೋರ್ಟ್ ಹೇಳಿತ್ತು.