ಬೆಂಗಳೂರು: ಸ್ಯಾಂಡಲ್‍ವುಡ್‍ನಲ್ಲಿ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದ್ರಜಿತ್ ಲಂಕೇಶ್ ಸಿಸಿಬಿ ಅಧಿಕಾರಿಗಳು ಮುಂದೆ ಹಾಜರಾಗಿದ್ದಾರೆ.
ಸಿಸಿಬಿ ಕಚೇರಿಯ ಮುಂದೆ ಮಾಧ್ಯಮಗಳ ಜೊತೆ ಮಾತನಾಡಿದ ಇಂದ್ರಜಿತ್ ಲಂಕೇಶ್, ಸಿಸಿಬಿ ಅಧಿಕಾರಿಗಳು ಜೊತೆ ಮೊದಲು ಮಾತನಾಡುತ್ತೇನೆ. ನನಗೆ ಯಾರದು ಒತ್ತಡ ಇಲ್ಲ. ಯಾರಿಗೂ ಹೆದರಲ್ಲ. ನಾನು ಮಾಧ್ಯಮದವರನ್ನು ಗೌರವಿಸುವೆ. ವಿಚಾರಣೆ ಮುಗಿಸಿ ಸವಿಸ್ತರವಾಗಿ ಮಾತನಾಡುವೆ ಎಂದು ಹೇಳಿ ಸಿಸಿಬಿ ಕಚೇರಿಯ ಒಳಗೆ ಹೋಗಿದ್ದಾರೆ.
ಇಂದ್ರಜಿತ್ ಸಿಸಿಬಿ ಕಚೇರಿಗೆ ಬರುವವರೆಗೆ ನಿರಂತರವಾಗಿ ಫೋನ್‍ಲ್ಲಿ ಬ್ಯುಸಿಯಾಗಿದ್ದರು. ಜೊತೆಗೆ ಕೈಯಲ್ಲಿ ಒಂದು ಫೈಲ್ ಹಿಡಿದುಕೊಂಡು ಸಿಸಿಬಿ ಕಚೇರಿಗೆ ಹೋಗಿದ್ದಾರೆ.
ಪೊಲೀಸರು ಸೂಕ್ತ ಭದ್ರತೆ ನೀಡಿದಲ್ಲಿ ಎಲ್ಲ ಮಾಹಿತಿ ನೀಡುವುದಾಗಿ ಇಂದ್ರಜಿತ್ ಹೇಳಿದ್ದಾರೆ. ಇಂದ್ರಜಿತ್ ಲಂಕೇಶ್ ಹೇಳಿಕೆ ಬಳಿಕ ಸಿಸಿಬಿಯಿಂದ ನೋಟಿಸ್ ನೀಡಿದ್ದರು. ಇಂದು ಸಿಸಿಬಿ ಕಚೇರಿಗೆ ಹಾಜರಾಗಿ ಡ್ರಗ್ಸ್ ಜಾಲದ ಬಗ್ಗೆ ಮಾಹಿತಿ ನೀಡುವಂತೆ ಹಾಗೂ ತಮ್ಮ ಹೇಳಿಕೆಗೆ ಸ್ಪಷ್ಟೀಕರಣ ಕೊಡುವಂತೆ ಸಿಸಿಬಿ ಅಧಿಕಾರಿಗಳು ನೋಟಿಸ್ ನೀಡಿದ್ದರು.
ಇಂದ್ರಜಿತ್ ಲಂಕೇಶ್‍ಗೆ ಗೊತ್ತಿರುವಷ್ಟು ಮಾಹಿತಿ ಸಿಸಿಬಿ ಮುಂದೆ ಹಂಚಿಕೊಳ್ಳಲಿ. ಯಾರ‍್ಯಾರು ದಂಧೆಯಲ್ಲಿ ಭಾಗಿಯಾಗಿದ್ದಾರೋ ಅವರ ಹೆಸರು ಹೇಳಲಿ. ಅವರಿಗೆ ಭಯವಿದ್ದರೆ ರಕ್ಷಣೆ ಕೊಡುವ ಕೆಲಸ ಮಾಡುತ್ತೀವಿ. ಇಂದ್ರಜಿತ್ ಲಂಕೇಶ್‍ಗೆ ಸಂಪೂರ್ಣ ಭದ್ರತೆ ಒದಗಿಸುತ್ತೀವಿ. ಯಾವುದೇ ಭಯ, ಅಂಜಿಕೆಯಿಲ್ಲದೆ ಸಿಸಿಬಿ ಮುಂದೆ ಮಾಹಿತಿ ಹಂಚಿಕೊಳ್ಳಲಿ. ಅವರು ಕೊಡುವ ಮಾಹಿತಿಯ ಆಧಾರದ ಮೇಲೆ ಮುಂದಿನ ಕಾನೂನು ತೀರ್ಮಾನ ಮಾಡುತ್ತೀವಿ ಎಂದು ಹಿರಿಯ ಸಿಸಿಬಿ ಅಧಿಕಾರಿಗಳು ಹೇಳಿದ್ದರು.