ರಷ್ಯಾದ ಆಕ್ರಮಣಕ್ಕೆ ಉಕ್ರೇನ್ ತತ್ತರಿಸಿ ಕಹೋಗಿದ್ದು, 10 ದಿನಗಳ ನಿರಂತರ ದಾಳಿಯಿಂದ ಸುಮಾರು 202 ಶಾಲೆಗಳು, 34 ಆಸ್ಪತ್ರೆಗಳು ಧ್ವಂಸಗೊಂಡಿವೆ.
ಈ ಬಗ್ಗೆ ವರದಿ ಮಾಡಿದ ಯುರೋಮೇಡನ್ ಪ್ರೆಸ್, ರಷ್ಯಾ ಪಡೆಗಳು ಉಕ್ರೇನ್ ಮೇಲೆ ದಾಳಿ ಮುಂದುವರಿಸಿದ್ದು, ಇದುವರೆಗೆ 202 ಶಾಲೆಗಳು, 34 ಆಸ್ಪತ್ರೆಗಳು.
1500 ವಸತಿ ಕಟ್ಟಡಗಳು ನಾಶವಾಗಿವೆ. ಇನ್ನು ಸುಮಾರು 900 ಮನೆಗಳಿಗೆ ನೀರು, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ ಎಂದು ಉಕ್ರೇನ್ ಅಧ್ಯಕ್ಷರ ಸಹಾಯಕ ಮೈಖೈಲೊ ಪೊಡೊಲ್ಯಕ್ ತಿಳಿಸಿರುವುದಾಗಿ ವರದಿ ತಿಳಿಸಿದೆ.
ಇನ್ನು ಉಕ್ರೇನ್ ನ ಆಗ್ನೇಯದಲ್ಲಿರುವ ಭದ್ರತಾಪಡೆಗಳ ಮಿಲಿಟರಿ ನೆಲೆಯನ್ನು ರಷ್ಯಾ ಆಕ್ರಮಿಸಿಕೊಂಡಿದ್ದುಮ ಅಲ್ಲಿನ ಉಪಕರಣಗಳು, ಫಿರಂಗಿಗಳು ಸೇರಿದಂತೆ ಮಿಲಿಟರಿ ನೆಲೆಯಲ್ಲಿದ್ದ ವಸ್ತುಗಳನ್ನು ವಶಪಡಿಸಿಕೊಂಡಿದೆ.
Laxmi News 24×7