Breaking News

ಇಬ್ಬರು ಪತ್ನಿಯರನ್ನು ಬಿಟ್ಟು ಮೂರನೇಯವಳನ್ನು ಮದುವೆ ಆಗಿದ್ದ ವ್ಯಕ್ತಿ ಆಕೆಯಿಂದಲೇ ಬರ್ಬರವಾಗಿ ಹತ್ಯೆ

Spread the love

ಬೆಳಗಾವಿ: ಇಬ್ಬರು ಪತ್ನಿಯರನ್ನು ಬಿಟ್ಟು ಮೂರನೇಯವಳನ್ನು ಮದುವೆ ಆಗಿದ್ದ ವ್ಯಕ್ತಿ ಆಕೆಯಿಂದಲೇ ಬರ್ಬರವಾಗಿ ಹತ್ಯೆಯಾಗಿರುವ ಘಟನೆ ಬೆಳಗಾವಿ ತಾಲೂಕಿನ ಬೆಳಗುಂದಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ತಾಲೂಕಿನ ಬಸೂರ್ತೆ ಗ್ರಾಮದ ನಿವಾಸಿ ಗಜಾನನ ನಾಯಕ್ ಕೊಲೆಯಾದ ವ್ಯಕ್ತಿ. ಹತ್ಯೆ ಪ್ರಕರಣ ಸಂಬಂಧ ಮೃತನ ಪತ್ನಿ ವಿದ್ಯಾ ಪಾಟೀಲ್, ಆಕೆಯ ಪುತ್ರ ಹೃತಿಕ್ ಹಾಗೂ ಸ್ನೇಹಿತ ಪರಶುರಾಮ ಗೋಂದಳಿಯನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಕರಣದ ಹಿನ್ನೆಲೆ: ಫೆ.26ರ ಮಧ್ಯರಾತ್ರಿ ಮೂವರು ಆರೋಪಿಗಳು ಗಜಾನನ ನಾಯ್ಕನನ್ನು ಕತ್ತು ಕೊಯ್ದು ಕೊಲೆಗೈದಿದ್ದಾರೆ. ಗಜಾನನ ಅವರು ಈ ಹಿಂದೆ ಎರಡು ಮದುವೆಯಾಗಿದ್ದರು. ಆದರೆ ಇಬ್ಬರೂ ಪತ್ನಿಯರೂ ಆತನನನ್ನು ಬಿಟ್ಟು ಹೋಗಿದ್ದರು. ಬಳಿಕ ಎರಡನೇ ಪತ್ನಿಯ ಮಗನೊಂದಿಗೆ ಗಜಾನನ ಬೆಳಗುಂದಿಯಲ್ಲಿ ಬೇಕರಿ ನಡೆಸಿ ಜೀವನ ಸಾಗಿಸುತ್ತಿದ್ದರು. ಈ ವೇಳೆ ವಿಧವೆ ವಿದ್ಯಾ ಪಾಟೀಲ್ ಜೊತೆಗೆ ರಿಜಿಸ್ಟರ್ ಮ್ಯಾರೇಜ್ ಕೂಡ ಆಗಿದ್ದರು. ಬಳಿಕ ಈಕೆ ತನ್ನ ಇಬ್ಬರು ಮಕ್ಕಳ ಜೊತೆ ಗಜಾನನ ಜೊತೆಗೆ ವಾಸವಿದ್ದಳು. ಅಲ್ಲದೇ ಗಜಾನನ ಸಾಲ ಮಾಡಿ ಪತ್ನಿಗೆ ಮನೆ ಕಟ್ಟಿಸಿ ಕೊಟ್ಟಿದ್ದರಂತೆ. ಕಳೆದ ಮೂರು ವರ್ಷಗಳ ಹಿಂದೆ ವ್ಯವಹಾರದಲ್ಲಿ ನಷ್ಟವಾಗಿ ಬೇಕರಿ ಬಂದ್ ಮಾಡಿದ್ದರು.

ಆರ್ಥಿಕ ನಷ್ಟ ಹಿನ್ನೆಲೆ ಮನೆ ಮಾರಾಟ ಮಾಡಲು ಗಜಾನನ ವಿದ್ಯಾ ಪಾಟೀಲ್‍ಗೆ ಒತ್ತಾಯಿಸುತ್ತಿದ್ದರಂತೆ. ಇಲ್ಲವಾದರೆ ತನ್ನ ಜೊತೆ ಮದುವೆಯಾದ ಬಗ್ಗೆ ಎಲ್ಲರಿಗೂ ತಿಳಿಸುವುದಾಗಿ ಬೆದರಿಕೆ ಹಾಕುತ್ತಿದ್ದರಂತೆ. ಹೀಗಾಗಿ ಗಜಾನನ ನಾಯಕ್ ಹತ್ಯೆಗೆ ವಿದ್ಯಾ ಪಾಟೀಲ್ ಸಂಚು ರೂಪಿಸಿದ್ದಳು ಎನ್ನಲಾಗುತ್ತಿದೆ.  

ಫೆ.26ರ ರಾತ್ರಿ ಮನೆಗೆ ಬರುತ್ತೇನೆ. ನಿನ್ನ ಮಗನನ್ನು ಊರಿಗೆ ಕಳುಹಿಸು ಎಂದು ವಿದ್ಯಾ ಗಜಾನನ ಅವರಿಗೆ ಕರೆ ಮಾಡಿ ತಿಳಿಸಿದ್ದಾಳೆ. ಅದರಂತೆ ಗಜಾನನ ಅವರು ಮಗನನ್ನು ಬಸೂರ್ತೆ ಗ್ರಾಮಕ್ಕೆ ಬಿಟ್ಟು ಬಂದಿದ್ದರು. ಅಂದು (ಫೆ.26) ರಾತ್ರಿ ಗಜಾನನ ನಾಯಕ್ ಮನೆಗೆ ಬಂದಿದ್ದ ವಿದ್ಯಾ ಪಾಟೀಲ್ ಪತಿಗೆ ಕಂಠಪೂರ್ತಿ ಮದ್ಯಪಾನ ಮಾಡಿಸಿದ್ದಾಳೆ.


Spread the love

About Laxminews 24x7

Check Also

ಪರಪ್ಪನ ಅಗ್ರಹಾರ ಜೈಲೋ? ರೆಸಾರ್ಟೋ?

Spread the loveಬೆಂಗಳೂರು, ಅಕ್ಟೋಬರ್​ 09: ಪರಪ್ಪನ ಅಗ್ರಹಾರ (Parappana Agrahara) ಜೈಲಿನಲ್ಲಿ ರೌಡಿ ಶೀಟರ್​ ಗುಬ್ಬಚ್ಚಿ ಸೀನಾ ಹುಟ್ಟುಹಬ್ಬ ಆಚರಣೆಯ ವಿಚಾರ ವ್ಯಾಪಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ