Breaking News

ಬಾಕಿ ವೇತನ ಕೊಡೋವರೆಗೂ ಪಲ್ಸ ಪೋಲಿಯೋ ಕೆಲಸ ಮಾಡಲ್ಲ: ಅಂಗನವಾಡಿ ಕಾರ್ಯಕರ್ತೆಯರ ಎಚ್ಚರಿಕೆ

Spread the love

ಕಳೆದ ಮೂರು ವರ್ಷಗಳ ವೇತನ ಕೊಡೋವರೆಗೂ ಪಲ್ಸ ಪೋಲಿಯೋ ಕಾರ್ಯಕ್ರಮದಲ್ಲಿ ನಾವು ಕೆಲಸ ಮಾಡೋದಿಲ್ಲ ಎಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಸಿಐಟಿಯು ಬೆಳಗಾವಿ ತಾಲೂಕಾ ಘಟಕ ಎಚ್ಚರಿಕೆ ನೀಡಿದೆ

ಕಳೆದ ಮೂರು ವರ್ಷಗಳ ವೇತನ ಕೊಡೋವರೆಗೂ ಪಲ್ಸ ಪೋಲಿಯೋ ಕಾರ್ಯಕ್ರಮದಲ್ಲಿ ನಾವು ಕೆಲಸ ಮಾಡೋದಿಲ್ಲ ಎಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಸಿಐಟಿಯು ಬೆಳಗಾವಿ ತಾಲೂಕಾ ಘಟಕ ಎಚ್ಚರಿಕೆ ನೀಡಿದೆ.

ಹೌದು ಬೆಳಗಾವಿ ತಾಲೂಕಿನ ಬೆಳಗುಂದಿ ವಲಯದ ಗಣೇಶಪುರ, ಹಿಂಡಲಗಾ, ಮಂಡೋಳಿ, ಹಂಗರಗಾ ಹಾಗೂ ಬೆಳಗುಂದಿ ಗ್ರಾಮಗಳ ಅಂಗನವಾಡಿ ಕಾರ್ಯಕರ್ತೆಯರಿಗೆ 2019, 2020 ಹಾಗೂ 2021ರ ಪಲ್ಸ ಪೋಲಿಯೋ ಕಾರ್ಯಕ್ರಮದಲ್ಲಿ ಕೆಲಸ ಮಾಡಿದ್ದಕ್ಕೆ ಈವರೆಗೂ ವೇತನ ನೀಡಿಲ್ಲವಂತೆ ಇದರಿಂದ ಆಕ್ರೋಶಗೊಂಡಿರುವ ಇವರು ಸಿಐಟಿಯು ನೇತೃತ್ವದಲ್ಲಿ ಗುರುವಾರ ಡಿಸಿ ಕಚೇರಿ ಮುಂಭಾಗದಲ್ಲಿ ಬಾಕಿ ವೇತನ ನೀಡುವಂತೆ ಆಗ್ರಹಿಸಿದ ಧರಣಿ ನಡೆಸಿದರು.ಈ ವೇಳೆ ಮಾತನಾಡಿದ ಸಿಐಟಿಯು ಮುಖಂಡೆ ಮಂದಾ ನೇವಗಿ 2019ರಿಂದ 2021ರವರೆಗೆ ಪಲ್ಸ ಪೋಲಿಯೋ ಕಾರ್ಯಕ್ರಮದಲ್ಲಿ ನಾವು ಕೆಲಸ ಮಾಡಿದ್ದೇವೆ. ಈ ವೇಳೆ ಕೆಲಸ ಮಾಡಿದ್ದಕ್ಕೆ ನಮಗೆ ಗೌರವಧನ ಈವರೆಗೂ ಕೊಟ್ಟಿಲ್ಲ. ನಾವು ಕೇಳಿದ್ರೆ ಈ ಸಲ ಕೊಡುತ್ತೇವೆ, ಮುಂದಿನ ಸಲ ಕೊಡುತ್ತೇವೆ ಎಂದು ಹೇಳುತ್ತಿದ್ದಾರೆ.ಇಂದು ತಾಲೂಕಾ ಅಧಿಕಾರಿಗಳು ಸಭೆ ನಡೆಸಿ ನಾವು ಕೊಡುತ್ತೇವೆ, ನೀವು ಸಾಮಾಜಿಕ ಕೆಲಸ ಮಾಡುತ್ತಿರಲ್ಲ ಎನ್ನುತ್ತಿದ್ದಾರೆ. ನಾವು ಸೊಶಿಯಲ್ ವರ್ಕ ಮಾಡುತ್ತೇವೆ ಆದರೆ ನಾವು ದುಡಿದಿದ್ದ ಹಣ ಕೇಳುತ್ತಿದ್ದೇವೆ. ಒಂದು ದಿವಸಕ್ಕೆ 75 ರೂಪಾಯಿ ಕೇಳುತ್ತಿದ್ದೇವೆ, ನಾವೇನು ಹೆಚ್ಚಿಗೆ ಕೇಳುತ್ತಿಲ್ಲ. ನಮ್ಮ ವೇತನ ಕೊಡೋವರೆಗೂ ನಾವು ಪಲ್ಸ ಪೋಲಿಯೋ ಕಾರ್ಯಕ್ರಮದಲ್ಲಿ ಕೆಲಸ ಮಾಡೋದಿಲ್ಲ ಎಂದು ಎಚ್ಚರಿಸಿದರು.


Spread the love

About Laxminews 24x7

Check Also

ಮೈಸೂರಿನಿಂದ ಉದಯಪುರಕ್ಕೆ ತೆರಳುತ್ತಿದ್ದ ರೈಲಿನ ಇಂಜಿನ್​ನಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಯಾಗಿತ್ತು.

Spread the loveರಾಮನಗರ: ಬೊಂಬೆನಗರಿ ಚನ್ನಪಟ್ಟಣದ ಬಳಿ ಚಲಿಸುತ್ತಿದ್ದ ರೈಲಿನ ಇಂಜಿನ್​​ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ಇಂದು (ಗುರುವಾರ) ನಡೆದಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ