ಬೆಂಗಳೂರು: ಪದವಿ ಕಾಲೇಜುಗಳಲ್ಲಿ ಹಿಜಾಬ್ ಗೆ ನಿರ್ಬಂಧವಿಲ್ಲ ಎಂದು ಸಚಿವ ಅಶ್ವಥ ನಾರಾಯಣ ಹೇಳಿದ್ದಾರೆ. ಈ ಬಗ್ಗೆ ಸಿಎಂ ಬೊಮ್ಮಾಯಿ ಕೂಡಾ ಸ್ಪಷ್ಟಪಡಿಸಿದ್ದಾರೆ ಎಂದು ಮಾಜಿ ಸಚಿವ ಯು ಟಿ ಖಾದರ್ ಹೇಳಿದರು.
ಸಿಎಂ ನಿವಾಸದ ಬಳಿ ಮಾತನಾಡಿದ ಅವರು, ಇವತ್ತು ಡಿಗ್ರಿ ಕಾಲೇಜುಗಳಲ್ಲೂ ಹಿಜಾಬ್ ಗೆ ಅವಕಾಶ ಕೊಡಬೇಕು.
ಈ ಬಗ್ಗೆ ಅಶ್ವಥ ನಾರಾಯಣ ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಆದರೆ ಕೆಲವು ಕಾಲೇಜುಗಳು, ಕೆಲವು ವಿವಿಗಳಲ್ಲಿ ಗೊಂದಲ ಆಗಲಿದೆ. ಈ ಬಗ್ಗೆ ಸಿಎಂ ಜತೆ ಚರ್ಚೆ ನಡೆಸಿದ್ದೇನೆ. ಅವರು ಕೂಡಾ ಡಿಗ್ರಿ ಕಾಲೇಜುಗಳಲ್ಲಿ ನಿರ್ಬಂಧವಿಲ್ಲ ಎಂದಿದ್ದಾರೆ ಎಂದರು.
ಈ ಬಗ್ಗೆ ಡಿಗ್ರಿ ಕಾಲೇಜುಗಳು, ವಿವಿಗಳು ಗೊಂದಲ ಮೂಡಿಸಿಕೊಳ್ಳೋದು ಬೇಡ. ಗೊಂದಲವಿದ್ದರೆ ಉನ್ನತ ಶಿಕ್ಷಣ ಸಚಿವರ ಜತೆ ಚರ್ಚಿಸಲಿ ಎಂದು ಯು.ಟಿ.ಖಾದರ್ ಹೇಳಿದರು.
ಪದವಿ ಕಾಲೇಜು ಆರಂಭವಾಗುತ್ತಿದ್ದು, ಸಮವಸ್ತ್ರ ನಿಯಮ ಇರುವ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಅದನ್ನು ಪಾಲಿಸಬೇಕು. ಸಮವಸ್ತ್ರ ನಿಗದಿ ಮಾಡದಿರುವಲ್ಲಿ ನ್ಯಾಯಾಲಯದ ತೀರ್ಪಿನ ಅನುಸಾರ ಉಡುಪು ಧರಿಸಿ ಬರಬೇಕು ಎಂದು ಮಂಗಳವಾರ ಉನ್ನತ ಶಿಕ್ಷಣ ಸಚಿವ ಡಾ| ಸಿ.ಎನ್. ಅಶ್ವತ್ಥ ನಾರಾಯಣ ಹೇಳಿದ್ದರು.