Breaking News

ಬೆಳಗಾವಿ; ಮತ್ತೆ 3 ನಗರಗಳಿಗೆ ವಿಮಾನ ಸಂಚಾರ

Spread the love

ಬೆಳಗಾವಿ, ಫೆಬ್ರವರಿ 04;ಬೆಳಗಾವಿವಿಮಾನ ನಿಲ್ದಾಣದಿಂದ ಮತ್ತೆ ಮೂರು ನಗರಗಳಿಗೆ ವಿಮಾನ ಸಂಚಾರ ಆರಂಭಿಸಲಾಗುತ್ತದೆ.

ಸ್ಟಾರ್ ಏರ್ ಈ ಕುರಿತು ಚರ್ಚೆ ನಡೆಸಿದ್ದು, ಶೀಘ್ರವೇ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ.

ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಿಂದ ಮಹಾರಾಷ್ಟ್ರದ ನಾಗ್ಪುರ, ರಾಜಸ್ಥಾನದ ಜೈಪುರ ಮತ್ತು ಬೆಂಗಳೂರಿಗೆ 3 ಹೊಸ ವಿಮಾನಗಳ ಸಂಚಾರ ಆರಂಭವಾಗಲಿದೆ. ನವದೆಹಲಿಗೆ ಸಹ ಬೆಳಗಾವಿಯಿಂದ ವಿಮಾನ ಸೇವೆ ಆರಂಭವಾಗಿದೆ.

ಸ್ಟಾರ್ ಏರ್ ಸಂಸ್ಥೆ ಈ ಕುರಿತು ಬೆಳಗಾವಿ ವಿಮಾನ ನಿಲ್ದಾಣದ ನಿರ್ದೇಶಕ ರಾಜೇಶ್‌ ಕುಮಾರ್ ಮೌರ್ಯ ಜೊತೆ ಮಾತುಕತೆ ನಡೆಸಿದೆ. ವಿಮಾನ ಸಂಚಾರ ಆರಂಭಿಸುವ ಕುರಿತು ವಿವರಗಳನ್ನು ನೀಡಿದೆ.

“ನಾಗ್ಪುರ, ಜೈಪುರ ಮತ್ತು ಬೆಂಗಳೂರು ಮಾರ್ಗದ ಬೇಡಿಕೆ ಕುರಿತು ಸ್ಟಾರ್ ಏರ್‌ನ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಈ ಮಾರ್ಗದಲ್ಲಿ ವಿಮಾನ ಸಂಚಾರ ಆರಂಭವಾಗಲಿದೆ” ಎಂದು ರಾಜೇಶ್‌ ಕುಮಾರ್ ಮೌರ್ಯ ಹೇಳಿದ್ದಾರೆ.

ಬೆಳಗಾವಿಯಲ್ಲಿ ರಾಜಸ್ಥಾನ ಮೂಲಕ ಸಾಕಷ್ಟು ಜನರಿದ್ದಾರೆ. ಅವರು ಜೈಪುರಕ್ಕೆ ತೆರಳಲು ಬೆಳಗಾವಿ-ಜೈಪುರ ವಿಮಾನ ಸಹಾಯಕವಾಗಲಿದೆ. ನಾಗ್ಪುರ ಮತ್ತು ಬೆಂಗಳೂರಿಗೆ ವ್ಯಾಪಾರದ ಉದ್ದೇಶಕ್ಕಾಗಿ ಸಂಚಾರ ನಡೆಸುವ ಜನರ ಸಂಖ್ಯೆ ಹೆಚ್ಚಿದೆ.

ಬ್ಯುಸಿಯೆಸ್ಟ್ ವಿಮಾನ ನಿಲ್ದಾಣ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣ ಕರ್ನಾಟಕದ 3ನೇ ಬ್ಯುಸಿಯೆಸ್ಟ್ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ 2021ರಲ್ಲಿ ಪಾತ್ರವಾಗಿತ್ತು. ಕಳೆದ ವರ್ಷದ ಏಪ್ರಿಲ್‌ನಿಂದ ಜೂನ್‌ ತನಕ 1,640 ವಿಮಾನಗಳು ನಿಲ್ದಾಣಕ್ಕೆ ಬಂದಿದ್ದವು.

ಕರ್ನಾಟಕದ ಹಳೆಯ ವಿಮಾನ ನಿಲ್ದಾಣವಾದ ಬೆಳಗಾವಿ ವಿಮಾನ ನಿಲ್ದಾಣ 2019ರಲ್ಲಿ ಉಡಾನ್ 3ನೇ ಹಂತದ ಯೋಜನೆಗೆ ಸೇರ್ಪಡೆಗೊಂಡಿದೆ. ಕೋವಿಡ್ ಪರಿಸ್ಥಿತಿ ಬಳಿಕ ಹೆಚ್ಚಿನ ವಿಮಾನಗಳು ಬೆಳಗಾವಿಗೆ ಆಗಮಿಸುತ್ತಿವೆ.

2019ರ ಏಪ್ರಿಲ್‌ನಿಂದ ಜೂನ್‌ ತನಕ 730 ವಿಮಾನ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬಂದಿತ್ತು. 2020-21ರಲ್ಲಿ 2.8 ಲಕ್ಷ ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿದ್ದರು.

ಬೆಳಗಾವಿ ವಿಮಾನ ನಿಲ್ದಾಣ ಕರ್ನಾಟಕ ಮಾತ್ರವಲ್ಲ ಅಕ್ಕಪಕ್ಕದ ಗೋವಾ, ಮಹಾರಾಷ್ಟ್ರ ರಾಜ್ಯಕ್ಕೆ ಸಹ ಸಂಪರ್ಕಕೊಂಡಿಯಾಗಿದೆ. ಬೆಂಗಳೂರು, ನವದೆಹಲಿ, ತಿರುಪತಿ, ಇಂದೋರ್ ಸೇರಿದಂತೆ ವಿವಿಧ ನಗರಗಳಿಗೆ ಬೆಳಗಾವಿಯಿಂದ ಸಂಪರ್ಕ ಕಲ್ಪಿಸಲಾಗುತ್ತಿದೆ.

ಶಾಶ್ವತವಾಗಿ ಬಂದ್ ಆಗುವ ಭೀತಿ ಎದುರಿಸುತ್ತಿದ್ದ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣ ಉಡಾನ್-3 ಯೋಜನೆ ಮೂಲಕ ಚೇತರಿಸಿಕೊಂಡಿದೆ. ಪ್ರತಿದಿನ 21,000 ಪ್ರಯಾಣಿಕರು ವಿಮಾನ ನಿಲ್ದಾಣ ಉಪಯೋಗಿಸುತ್ತಿದ್ದಾರೆ. 2018ರಲ್ಲಿ 18,000 ಜನರು ವಿಮಾನ ನಿಲ್ದಾಣ ಬಳಕೆ ಮಾಡುತ್ತಿದ್ದರು.

ಉಡಾನ್ 3 ಯೋಜನೆಯಡಿ ಇಂಡಿಗೋ ಹೈದರಾಬಾದ್‌ಗೆ, ಅಲೈನ್ಸ್‌ ಏರ್ ಪುಣೆ, ಸ್ಪೈಸ್‌ ಜೆಟ್‌ ಹೈದರಾಬಾದ್/ ಮುಂಬೈ, ಸ್ಟಾರ್‌ ಏರ್‌ ಅಹಮದಾಬಾದ್, ಸೂರತ್, ಜೈಪುರ, ಜೋಧ್‌ಪುರ, ನಾಗ್ಪುರ, ನಾಸಿಕ್, ತಿರುಪತಿ. ಟ್ರೂಜೆಟ್ ಹೈದರಾಬಾದ್, ಕಡಪಾ, ತಿರುಪತಿ, ಮೈಸೂರಿಗೆ ವಿಮಾನ ಹಾರಾಟ ನಡೆಸಲು ಒಪ್ಪಿಗೆ ಪಡೆದಿದ್ದವು.

2020ರ ಜನವರಿಯಿಂದ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಿಂದ ಮೈಸೂರು, ತಿರುಪತಿ, ಹೈದರಾಬಾದ್‌ಗೆ ವಿಮಾನ ಹಾರಾಟ ಆರಂಭವಾಗಿತ್ತು. ಟ್ರೂ ಜೆಟ್ ಸಂಸ್ಥೆಯು ವಿಮಾನ ಸೇವೆಯನ್ನು ಆರಂಭಿಸಿತ್ತು. ಈ ಮಾರ್ಗದಲ್ಲಿ ವಿಮಾನ ಸಂಚಾರ ಆರಂಭಿಸಬೇಕು ಎಂದು ಬಹಳ ಬೇಡಿಕೆ ಇತ್ತು. ಬೇರೆ ಬೇರೆ ಮಾರ್ಗದ ವಿಮಾನ ಸಂಚಾರ ಆರಂಭವಾದ ಬಳಿಕ ಪ್ರಯಾಣಿಕರ ಸಂಖ್ಯೆ ಸಹ ಹೆಚ್ಚಳವಾಗುತ್ತಿದೆ.


Spread the love

About Laxminews 24x7

Check Also

ಚಾತುರ್ಮಾಸ ಹಿನ್ನೆಲೆ ಜೈನ ಮುನಿ ಶಿಷ್ಯೆಯರ ಪುರಪ್ರವೇಶ ಬೆಳಗಾವಿ ಜೈನ ಸಮಾಜದಿಂದ ಭವ್ಯ ಮೆರವಣಿಗೆಯೊಂದಿಗೆ ಸ್ವಾಗತ

Spread the love ಚಾತುರ್ಮಾಸ ಹಿನ್ನೆಲೆ ಜೈನ ಮುನಿ ಶಿಷ್ಯೆಯರ ಪುರಪ್ರವೇಶ ಬೆಳಗಾವಿ ಜೈನ ಸಮಾಜದಿಂದ ಭವ್ಯ ಮೆರವಣಿಗೆಯೊಂದಿಗೆ ಸ್ವಾಗತ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ