ಬೆಂಗಳೂರು: ಇತ್ತೀಚಿನ ಕೆಲ ಘಟನೆಗಳ ನಂತರ ನಗರದಲ್ಲಿ ಸದ್ಯ ಟೋಯಿಂಗ್ ಮಾಡುತ್ತಿಲ್ಲ. ಟೋಯಿಂಗ್ ಅನ್ನು ಕಟ್ಟುನಿಟ್ಟಿನ ನಿಯಮಗಳೊಂದಿಗೆ ಆರಂಭಿಸಲಾಗುತ್ತದೆ ಅಂತ ಪೊಲೀಸ್ ಇಲಾಖೆ ಹೇಳುತ್ತಿದೆ. ಹಾಗಾದರೆ ಟೋಯಿಂಗ್ ಪುನಾರಂಭ ಆದರೆ ಯಾವೆಲ್ಲ ನಿಯಮಗಳು ಇರಲಿವೆ ಎಂಬುದರ ಮಾಹಿತಿ ಇಲ್ಲಿದೆ.
ಇತ್ತೀಚಿಗೆ ಟೋಯಿಂಗ್ ಸಿಬ್ಬಂದಿ ಸಾರ್ವಜನಿಕರೊಂದಿಗೆ ನಡೆದುಕೊಳ್ಳುವ ರೀತಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಭಾರಿ ಜನಾಕ್ರೋಶಕ್ಕೆ ಕಾರಣವಾಗಿತ್ತು. ಹೀಗಾಗಿ ಸದ್ಯ ಟೋಯಿಂಗ್ ನಿಲ್ಲಿಸಿರುವ ಬೆಂಗಳೂರು ಸಂಚಾರಿ ಪೊಲೀಸರು ಪುನಃ ಟೋಯಿಂಗ್ ಆರಂಭಿಸಲು ಸಾಕಷ್ಟು ಕಟ್ಟುನಿಟ್ಟಿನ ನಿಯಮ ತರಲು ಮುಂದಾಗಿದ್ದಾರೆ.
ಟೋಯಿಂಗ್ ನಿಯಮಗಳು ಹೀಗಿರಲಿವೆ..
1. ಗಂಟೆಗೆ ಗರಿಷ್ಠ 10 ಕಿ.ಮೀ ವೇಗದಲ್ಲಷ್ಟೆ ಟೋಯಿಂಗ್ ವಾಹನ ಚಲಿಸಬೇಕು
2. ಸೈರನ್ ಮಾಡಿಕೊಂಡೆ ಹೋಗಬೇಕು
3. ನೋ ಪಾರ್ಕಿಂಗ್‌ನಲ್ಲಿರುವ ವಾಹನವನ್ನು 4 ದಿಕ್ಕುಗಳಲ್ಲಿ ಫೋಟೋ ತೆಗೆಯಬೇಕು
4. ಐದು ನಿಮಿಷದೊಳಗಡೆ ವಾಹನದ ಮಾಲೀಕ ಬಂದರೆ ನೋ ಪಾರ್ಕಿಂಗ್ ದಂಡ ಕಟ್ಟಿಸಿಕೊಂಡು ಬಿಡಬೇಕು
5. ನೋ ಪಾರ್ಕಿಂಗ್‌ನಲ್ಲಿ ಇದ್ದರೆ ವಾಹನದ ವಿಡಿಯೋವನ್ನು 30 ದಿನ ಸುರಕ್ಷಿತವಾಗಿ ಇಡಬೇಕು
6. 2800 ಎಂಎಂ ವ್ಹೀಲ್ ಗಾತ್ರದ ವಾಹನಗಳನ್ನು ಟೋಯ್ ಮಾಡುವ ಸಾಮರ್ಥ್ಯ ಟೋಯಿಂಗ್ ವಾಹನಕ್ಕೆ ಇರಬೇಕು
7. ಎರಡು ಟನ್ ಹೊರುವ ಸಾಮರ್ಥ್ಯ ಟೋಯಿಂಗ್ ವಾಹನಕ್ಕೆ ಇರಬೇಕು
8. ಪ್ರತಿದಿನ ಟೋಯಿಂಗ್ ಸಿಬ್ಬಂದಿ ಹಾಗೂ ಮಾಲೀಕರು ಠಾಣೆಯಲ್ಲಿ ನೋಂದಣಿ ಮಾಡಬೇಕು. ಇದನ್ನು ಠಾಣಾ ಇನ್ಸಪೆಕ್ಟರ್ ಪರಿಶೀಲನೆ ಮಾಡಬೇಕು
9. ಟೋಯಿಂಗ್ ವೇಳೆ ವಿಡಿಯೋ ಚಿತ್ರೀಕರಣ ಕಡ್ಡಾಯ
10. ಇನ್ಸ್‌ಪೆಕ್ಟರ್ ಸ್ಥಳದಲ್ಲಿರುವ ಸಿಬ್ಬಂದಿ ಬಾಡಿ ಕ್ಯಾಮರಾದಿಂದ ಬರುವ ವಿಶ್ಯುಲ್ ಪರೀಕ್ಷಿಸಬೇಕು
11. ಪವರ್ ಸ್ಟೇಯರಿಂಗ್ ಇರುವ ವಾಹನ ಬಳಸಬೇಕು
12. ರೊಟೇಶನ್ ಪದ್ಧತಿಯಲ್ಲಿ ಎಲ್ಲ ಎಎಸ್‌ಐಗಳನ್ನು ಟೋಯಿಂಗ್ ಕಾರ್ಯಕ್ಕೆ ನೇಮಕ ಮಾಡಬೇಕು
13. ಹ್ಯಾಂಡಿ ಕ್ಯಾಮರಾ, ಮುಂಬದಿ ಹಾಗೂ ಹಿಂಬದಿ ಎರಡೂ ಸಿಸಿ ಕ್ಯಾಮರಾಗಳು ಮೊಬೈಲ್ ಡಿವಿಆರ್ ಜೊತೆಗೆ ಜಿಪಿಎಸ್ ಇರಬೇಕು
14. ಧ್ವನಿವರ್ಧಕ ಇರಬೇಕು
ಇವು ಇಷ್ಟು ನಿಮಯಗಳು ಮುಂದಿನ ದಿನಗಳಲ್ಲಿ ಟೋಯಿಂಗ್ ಮಾಡಲು ಅನ್ವಯಿಸುವ ಸಾಧ್ಯತೆ ಇದೆ.