Breaking News

ನೀವು ಅತಿಯಾಗಿ Dolo-650 ಮಾತ್ರೆ ತಗೊಳ್ತಾ ಇದ್ದೀರಾ.? ಎಚ್ಚರ ಅತಿಯಾದ ಸೇವನೆಯು ಮಾರಣಾಂತಿಕ.!

Spread the love

ನವದೆಹಲಿ: ಕೊರೋನಾ ( Coronavirus ) ನಂತ್ರ ಡೋಲೋ-650 ಮಾತ್ರೆಯ ಸೇವನೆ ಹೆಚ್ಚಳವಾಗಿದೆ. ಸಣ್ಣ-ಪುಟ್ಟ ಮೈಕೈ ನೋವಿಗೂ ಡೋಲೋ ಮಾತ್ರೆ ತೆಗೆದುಕೊಳ್ಳುವವರ ಸಂಖ್ಯೆ ಹೆಚ್ಚಿದೆ. ಆದ್ರೇ.. ಅತಿಯಾದಂತ ಡೋಲೋ ಮಾತ್ರೆ ಸೇವನೆಯೇ ಮಾರಣಾಂತಿಕವಾಗಿಬಿಡುತ್ತದೆ.

ಅಲ್ಲದೇ ಅನೇಕ ಅಡ್ಡ ಪರಿಣಾಮಗಳು ಕೂಡ ಉಂಟಾಗಲಿವೆ ಎಂದು ಅನೇಕ ಸಂಶೋಧನೆ, ವಿಜ್ಞಾನಿಗಳು ತಿಳಿಸಿದ್ದಾರೆ.

 

ಕಳೆದ 2 ವರ್ಷಗಳಲ್ಲಿ, ಕೋವಿಡ್-19 ( Covid-19 ) ನಮ್ಮ ಜಗತ್ತನ್ನು ತಲೆಕೆಳಗು ಮಾಡಿ ಲಕ್ಷಾಂತರ ಸಾವುಗಳಿಗೆ ಕಾರಣವಾಯಿತು. ವರದಿಯಾದ ಹೆಚ್ಚಿನ ಪ್ರಕರಣಗಳಲ್ಲಿ, ಕೋವಿಡ್ ನ ಸಾಮಾನ್ಯ ಲಕ್ಷಣಗಳೆಂದರೆ ಶೀತ, ಕೆಮ್ಮು, ಜ್ವರ ಮತ್ತು ಶ್ವಾಸಕೋಶದ ಸೋಂಕು ( cold, cough, fever and lung infection ). ಆದರೆ ಇಲ್ಲಿಯವರೆಗೆ ಕೊರೊನಾ ವೈರಸ್ ಗೆ ನಿಖರವಾದ ಚಿಕಿತ್ಸೆ ಕಂಡುಹಿಡಿಯಲಾಗಿಲ್ಲ.

ಅಂದಹಾಗೇ ರೋಗಲಕ್ಷಣಗಳ ಆಧಾರದ ಮೇಲೆ ಕೊರೋನಾ ವೈರಸ್ ಗೆ ( Covid-19 Case ) ಚಿಕಿತ್ಸೆ ನೀಡಲಾಗುತ್ತಿರುವುದರಿಂದ, ಜನರು ವೈದ್ಯಕೀಯ ಸಲಹೆಯಿಲ್ಲದೆಯೂ ಡೊಲೊ-650 ( Dolo-650 Tablet ) ನಂತಹ ಔಷಧಿಗಳನ್ನು ಹೆಚ್ಚಾಗಿ ತೆಗೆದುಕೊಳ್ಳಲು ಪ್ರಾರಂಭಿಸಿದ್ಧಾರೆ.

ಆದಾಗ್ಯೂ, ಈ ಔಷಧೋಪಚಾರದ ಅನೇಕ ಸಂಭಾವ್ಯ ಅಡ್ಡ ಪರಿಣಾಮಗಳಿವೆ ಎಂದು ನಿಮಗೆ ತಿಳಿದಿದೆಯೇ? ಪ್ರಯೋಜನಗಳಿದ್ದರೂ, ಅಡ್ಡ ಪರಿಣಾಮಗಳಿವೆ. ಕೆಲವು ಮಾರಣಾಂತಿಕವೂ ಆಗಿವೆ. ಅಲ್ಲದೇ ಅನೇಕ ಅಡ್ಡಪರಿಣಾಮಗಳು ಕೂಡ ಉಂಟಾಗಲಿವೆ.

 

ಡೋಲೋದ ಗಂಭೀರ ಅಡ್ಡ ಪರಿಣಾಮಗಳು

  • ನಿಧಾನ ಹೃದಯ ಬಡಿತ
  • ಧ್ವನಿ ತಂತುವಿನ ಊತ
  • ಶ್ವಾಸಕೋಶದ ಸೋಂಕು
  • ಕಡಿಮೆ ಉಸಿರಾಡುವಿಕೆ
  • ನರವ್ಯೂಹದ ಮೇಲೆ ಪರಿಣಾಮ ಬೀರಿದೆ
  • ಹೆಚ್ಚಿದ ಹೃದಯ ಬಡಿತ

Spread the love

About Laxminews 24x7

Check Also

ಬಾಗಲಕೋಟೆ: ಹಳ್ಳಕ್ಕೆ ಬಿದ್ದ ಬಾಲಕ, ಕಾಪಾಡಲು ಹೋದ ಯುವಕ ನೀರುಪಾಲು

Spread the loveಬಾಗಲಕೋಟೆ: ಮಳೆಯಿಂದಾಗಿ ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಮುಳುಗಿ ಇಬ್ಬರು ಮೃತಪಟ್ಟಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಇಳಕಲ್​ ತಾಲೂಕಿನ ಚಿಕನಾಳ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ