ಬೆಳಗಾವಿ : ಗಡಿ ಜಿಲ್ಲೆ ಕುಂದಾನಗರಿಯಲ್ಲಿ ಕೊರೊನಾ ಸೋಂಕಿನ ಮೂರನೇಯ ಅಲೆಯು ತನ್ನ ಅಟ್ಟಹಾಸವನ್ನು ತಲೆ ಎತ್ತಿ ಮೇರೆದು ಪುಟ್ಟ ಮಕ್ಕಳನ್ನೇ ಟಾರ್ಗೆಟ್ ಮಾಡುತ್ತಿದೆ. ಹಂತದರಲ್ಲೂ ಸೋಮವಾರದಿಂದಲ್ಲೆ ಶಾಲೆಗಳು ಮತ್ತೆ ಪ್ರಾರಂಭವಾಗುತ್ತಿದೆ, ಎಂದು ಪಾಲಕರಲ್ಲಿ ಆತಂಕವು ಮನೆ ಮಾಡಿದೆ.
ಹೌದು ಗಡಿ ಜಿಲ್ಲೆ ಬೆಳಗಾವಿಯಲ್ಲಿ ಕೊರೊನಾದ ಮೂರನೇಯ ಅಲ್ಲೆಯು ತನ್ನ ಅಟ್ಟಹಾಸವನ್ನು ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ಪುಟ್ಟ ಮಕ್ಕಳನ್ನು ಟಾರ್ಗೆಟ್ ಮಾಡುತ್ತಿದೆ. ಕಿತ್ತೂರು ತಾಲೂಕಿನ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ 190 ಮಕ್ಕಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ನಿಪ್ಪಾಣಯ ಖಾಸಗಿ ಪಿಯು ಕಾಲೇಜಿನಲ್ಲಿ 16 ಜನ ವಿದ್ಯಾರ್ಥಿಗಳಿಗೆ ಕೋವಿಡ್ ದೃಢಪಟ್ಟಿದ್ದು ಎಲ್ಲೆಡೆ ಆತಂಕ ಮನೆಮಾಡಿದೆ. ಬೆಳಗಾವಿ ಖಾಸಗಿ ಶಾಲೆಯ 7 ಜನ ಸಿಬ್ಬಂದಿ ಹಾಗೂ ಓರ್ವ ವಿದ್ಯಾರ್ಥಿಗೆ ಕೊರೊನಾ ಸೋಂಕು ಟಾರ್ಗೆಟ್ ಮಾಡುತ್ತಿದೆ. ಜಿಲ್ಲಾದ್ಯಂತ ಒಟ್ಟಾರೆ 350ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ಈ ವರೆಗೆ ದೃಢಪಟ್ಟಿದೆ. ಕೋವಿಡ್ ಭೀತಿಯ ನಡುವೆಯೂ ಜಿಲ್ಲಾಧಿಕಾರಿಗಳ ಆದೇಶದಂತೆ ಶಾಲೆಗಳು ಪುನರಾಆರಂಭವಾಗಲಿವೆ. ದಿ17 ಸೋಮವಾರದಿಂದ ಜಿಲ್ಲೆಯಲ್ಲಿ 1 ರಿಂದ 9 ನೇ ತರಗತಿ ವರೆಗಿನ ಶಾಲೆಗಳು ಆರಂಭವಾಗುತ್ತಿದ್ದು, ಜನವರಿ 11 ರಿಂದ 17ರ ವರೆಗೆ ನೀಡಿದ್ದ ರಜೆ ಸೋಮವಾರಕ್ಕೆ ಮುಕ್ತಾಯವಾಗಲಿದೆ.
ಇನ್ನು ಕೋವಿಡ್ ಸೋಂಕು ಪಕ್ಕದ ಜಿಲ್ಲೆಯಲ್ಲಿ ಮಹಾರಾಷ್ಟ್ರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ವ್ಯಾಪಕವಾಗಿ ಹರದಿರುವುದರಿಂದ ಗಡಿ ಜಿಲ್ಲೆ ಬೆಳಗಾವಿಯಲ್ಲಿಯೂ ದೊಡ್ಡ ಮಟ್ಟದಲ್ಲಿ ಸೋಂಕಿನ ಬೀತಿ ಜಿಲ್ಲೆಯ ಜನತೆಯನ್ನು ನಿದ್ದೆ ಗೆಡಸಿದೆ. ಇದರ ನಡುವೆಯೂ ಶಾಲೆಗಳ ತರಗತಿಗಳು ಪ್ರಾರಂಭವಾದ್ದರಿಂದ, ಮಕ್ಕಳ ಆರೋಗ್ಯ ಕುರಿತಂತೆ ಪೋಷಕರಲ್ಲಿ ಆತಂಕವನ್ನು ಉಂಟು ಮಾಡುತ್ತಿದೆ. ಇದರಿಂದಾಗಿ ಪಾಲಕರು ತಮ್ಮ ಮಕ್ಕಳನ್ನು ಶಾಲೆಗಳಿಗೆ ಕಳಿಸುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಒಟ್ಟಿನಲ್ಲಿ ಬೆಳಗಾವಿ-ಮಹಾರಾಷ್ಟ್ರ ಗಡಿಯಲ್ಲಿ ಇಷ್ಟೇಲ್ಲಾ ಬಂದೊಬಸ್ತ ಮಾಡಿದರು ಸೋಂಕು ಮಕ್ಕಳನ್ನು ಟಾರ್ಗೆಟ್ ಮಾಡುತ್ತಿದೆ, ಇದನ್ನೆಲ್ಲಾ ಗಮನಿಸಿದ ಜಿಲ್ಲಾಡಳಿತ ಹಾಗೂ ಸರಕಾರ ಯಾವ ಕ್ರಮ ಕೈಗೊಳ್ಳಲು ಎಂಬುವುದನ್ನು ಕಾದು ನೋಡಬೇಕಾಗಿದೆ.
Laxmi News 24×7