ಬಾಗಲಕೋಟೆ : ಸಚಿವ ಸಂಪುಟದ ಬದಲಾವಣೆ ಬಗ್ಗೆ ಮಾಹಿತಿ ಇಲ್ಲ. ಮುಖ್ಯಮಂತ್ರಿಗಳ ಪರಮಾಧಿಕಾರ ಇದೆ. ಪಕ್ಷದ ಮುಖಂಡರು,ರಾಜ್ಯ ಮುಖಂಡರು, ರಾಷ್ಟ್ರೀಯ ನಾಯಕರು, ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ.
ನಗರದ ತೋಟಗಾರಿಕೆ ಮೇಳದ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾನು ಸ್ನೇಹಿತರು ಅಥವಾ ಮಾಧ್ಯಮದವರ ಮುಂದೆ ನಾನು ಮುಂದಿನ ಮುಖ್ಯಮಂತ್ರಿ ಎಂದು ಹೇಳಿದ್ದರೆ ಕೇಳಿಕೊಳ್ಳಿ, ಸುಮ್ಮನೆ ಯಾರಾದರೂ ಹೇಳಿದ್ದರೆ, ನನ್ನ ಏಕೆ ಹೊಣೆಗಾರನನ್ನಾಗಿ ಮಾಡುತ್ತೀದ್ದೀರಿ.
ಚರ್ಚೆ ಆಗುತ್ತಿದೆ ನಿಜ. ಆದರೆ, ನಾನು ಎಲ್ಲೂ ಮುಂದಿನ ಸಿಎಂ ವಿಚಾರವಾಗಿ ಮಾತನಾಡಿಲ್ಲ. ಸಿಎಂ ಬಸವರಾಜ ಬೊಮ್ಮಾಯಿ ಅವರ ನಮ್ಮ ನಡುವೆ 30 ವರ್ಷದ ಕುಟುಂಬ ಸಂಬಂಧ ಇದೆ ಎಂದರು.