Breaking News

ಕರ್ನಾಟಕ ಬಂದ್ ಮಾಡುವ ಅಗತ್ಯ ಇಲ್ಲ,: ಪ್ರಹ್ಲಾದ್ ಜೋಶಿ

Spread the love

ಮರಾಠಿ ಮತ್ತು ಕನ್ನಡಿಗರ ನಡುವೆ ಉತ್ತಮ ಸುಮಧುರ ಬಾಂಧವ್ಯ ಇದೆ, ಘಟನೆಗೆ ಎಲ್ಲ ಎಂಇಎಸ್ ಅಂತಲೂ ಹೇಳುವುದಿಲ್ಲ, ಮರಾಠಿಗರ ಹೆಸರಿನಲ್ಲಿ ಈ ರೀತಿ ಮಾಡುತ್ತಿದ್ದಾರೆ, ದೇಶದಲ್ಲಿ ಎಲ್ಲರೂ ಚೆನ್ನಾಗಿ ಇರಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

ಹುಬ್ಬಳ್ಳಿ ನಗರದಲ್ಲಿಂದು ಮಾತಾನಾಡಿದ ಅವರು ಕನ್ನಡಿಗರು ಮತ್ತು ಮರಾಠಿಗರು ಇಲ್ಲಿ ಎಲ್ಲರೂ ಒಂದಾಗಿದ್ದೇವೆ, ಕೆಲವರು ತಮ್ಮ ಬೇಳೆ ಬೇಯಿಸಿಕೊಳ್ಳಲು ಈ ರೀತಿ ಮಾಡುತ್ತಿದ್ದಾರೆ,ಸಿ ಎಮ್ ಉದ್ಧವ್ ಠಾಕ್ರೆ, ಶರತ್ ಪವಾರ್ ಇದನ್ನ ಗಮನಿಸಬೇಕು.ಇನ್ನೂ ಬೆಳಗಾವಿ ಸಮಗ್ರ ಕರ್ನಾಟಕದ್ದು, ಅಲ್ಲಿರುವ ಕನ್ನಡಿಗರಿಗೆ ಅವರು ರಕ್ಷಣೆ ಕೊಡಬೇಕು,ಇಲ್ಲಿರುವ ಮರಾಠಿಗರಿಗೆ ರಕ್ಷಣೆ ಕೊಡೋದು ನಮ್ಮ ಜವಾಬ್ದಾರಿ ಎಂದರು‌.ಇನ್ನೂ ಕರ್ನಾಟಕ ಬಂದ್ ಕುರಿತು ಮಾತಾನಾಡಿ, ಬಂದ್ ಮಾಡುವ ಅಗತ್ಯ ಇಲ್ಲ, ನಾವು ನಮ್ಮದೇ ರಾಜ್ಯ ಬಂದ್ ಮಾಡಿ ಏನು ಅವಶ್ಯಕತೆ ಇದೆ, ಬಂದ್ ಕರೆ ಕೊಟ್ಟವರಿಗೆ ನನ್ನ ಆಗ್ರಹ,ಯಾವುದೇ ಕಾರಣಕ್ಕೂ ಬಂದ್ ಮಾಡಬೇಡಿ, ಕೊರೋನಾ ಸಮಯದಲ್ಲಿ ಬಹಳ ಕಷ್ಟ ಆಗಿದೆ, ಸಮಾಜ ವಿದ್ರೋಹಿ ಚಟುವಟಿಕೆ ಮಾಡಿದವರಿಗೆ ಕಠಿಣ ಕ್ರಮಕ್ಕೆ ಶಿಕ್ಷೆ ಆಗುತ್ತೆ ಎಂದು ಹೇಳಿದರು.


Spread the love

About Laxminews 24x7

Check Also

ಕ್ರಾಂತಿ ಮಹಿಳಾ ಮಂಡಳ ಉಮಾ ಸಂಗೀತ ಪ್ರತಿಷ್ಠಾನದಿಂದ ಹಿರಿಯ ನಾಗರಿಕ ದಿನಾಚರಣೆ ಗುರು, ಹಿರಿಯರನ್ನು ಗೌರವಿಸಿ: ಜಯ ಜೋಶಿ

Spread the love ಕ್ರಾಂತಿ ಮಹಿಳಾ ಮಂಡಳ ಉಮಾ ಸಂಗೀತ ಪ್ರತಿಷ್ಠಾನದಿಂದ ಹಿರಿಯ ನಾಗರಿಕ ದಿನಾಚರಣೆ ಗುರು, ಹಿರಿಯರನ್ನು ಗೌರವಿಸಿ: …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ