ಬೆಳಗಾವಿಯಲ್ಲಿ ಒಂದೇ ದಿನ
ಹಲವಾರು ಮಕ್ಕಳಿಗೆ ನಾಯಿಗಳ
ಕಡಿತ!ಸಿವಿಲ್ ಆಸ್ಪತ್ರೆಗೆ ದಾಖಲು
ತುರ್ತಾಗಿ ಚಿಕಿತ್ಸೆ ನೀಡಿದ ವೈದ್ಯರು
ಈ ನಾಯಿಗಳ ನಿಯಂತ್ರಣಕ್ಕೆ
ಮಹಾನಗರ ಪಾಲಿಕೆಯ ಕಠಿಣ
ಕ್ರಮ ಅವಶ್ಯಕ
ಬೀದಿ ನಾಯಿಗಳು ಮಕ್ಕಳನ್ನು
ಕಚ್ಚುವದು,ಎತ್ತಿಕೊಂಡೇ ಹೋಗುವದು ಅನೇಕ ವರ್ಷಗಳಿಂದ ನಡೆದೇ ಇದೆ.ಆದರೆ ಈ ಬಗ್ಗೆ ಯಾವದೇ ನಿರ್ಧಿಷ್ಟ ಕ್ರಮ
ಎಂಬುದೇ ಇಲ್ಲ.
ಇಂದು ಶುಕ್ರವಾರ ಸಣ್ಣ ಮಕ್ಕಳಿಗೆ
ಬೀದಿ ನಾಯಿಗಳು ಕಚ್ಚಿದ ಹಲವಾರು ಪ್ರಕರಣಗಳು ವರದಿಯಾಗಿವೆ.ಇಂದು
ಇವೆಲ್ಲವೂ ನಡೆದದ್ದು ಹನುಮಾನ ನಗರ,ಜಯನಗರ,ವಿನಾಯಕ ನಗರ ಹಾಗೂ ಲಕ್ಷ್ಮೀ ಟೇಕಡಿ ಪ್ರದೇಶಗಳಲ್ಲಿಯೇ ಎಂಬುದು ಗಮನಾರ್ಹವಾಗಿದೆ.ಈ ಪ್ರದೇಶಗಳಲ್ಲಿ ಬೀದಿ ನಾಯಿಗಳು ಅಧಿಕ ಸಂಖ್ಯೆಯಲ್ಲಿವೆ.ಇವುಗಳ ನಿಯಂತ್ರಣಕ್ಕೆ ಕ್ರಮ ಕೈಕೊಳ್ಳುವಲ್ಲಿ ತೊಂದರೆಗಳೂ ಇವೆ.
ಸರ್ವೋನ್ನತ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಈ ನಾಯಿಗಳನ್ನು ಕೊಲ್ಲುವಂತಿಲ್ಲ.ಇವುಗಳನ್ನು ಹಿಡಿದು ದೂರದ ಕಾಡುಗಳಲ್ಲಿ ಬಿಡುವಂತಿಲ್ಲ!
ಒಂದೆರಡು ಪ್ರಾಣಿ ದಯಾ ಸಂಘಗಳು ಬೀದಿ ನಾಯಿಗಳನ್ನು ಹಿಡಿದು ಸಂತಾನ ಹರಣ ಶಸ್ತ್ರ ಚಿಕಿತ್ಸೆ ನಡೆಸಲು ಮುಂದಾಗಿದ್ದವು.ತಮ್ಮ ಸಂಸ್ಥೆಗಳಿಗೆ
ಪಾಲಿಕೆಯು ನಗರದ ಹೊರವಲಯದಲ್ಲಿ ಒಂದಿಷ್ಟು ಜಾಗೆ ಕೊಟ್ಟರೆ ಬೀದಿ ನಾಯಿಗಳನ್ನು ನಿಯಂತ್ರಿಸಲು ಕ್ರಮ ಕೈಕೊಳ್ಳುವದಾಗಿಯೂ ಸಂಸ್ಥೆಗಳು ಹೇಳಿದ್ದವು.ನಾನೇ ಸ್ಮಾರ್ಟ ಸಿಟಿಯ ಅಧಿಕಾರಿಗಳೊಂದಿಗೆ ಒಂದು ಸಂಘಟನೆಯ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದ್ದೆ.ಆದರೆ ಮುಂದೆ ಯಾವದೇ ಕ್ರಮ ಆಗಲಿಲ್ಲ.
ಇಂದು ಶುಕ್ರವಾರ ಸಂಜೆ ಪಾಲಿಕೆಯ ಆರೋಗ್ಯ ಅಧಿಕಾರಿಗಳನ್ನು ಸಂಪರ್ಕಿಸಿದ್ದೆ.ಆಯುಕ್ತರ ಜೊತೆಗೆ ನಾಳೆ ಶನಿವಾರ ಚರ್ಚಿಸುವದಾಗಿಯೂ ಹೇಳಿದ್ದೇನೆ.
ಇಂದು ನಾಯಿ ಕಡಿತಕ್ಕೆ ಒಳಗಾದ ಮಕ್ಕಳಿಗೆ ಸಿವಿಲ್ ಆಸ್ಪತ್ರೆಯ ತುರ್ತು
ಘಟಕದ ವೈದ್ಯ ಸಿಬ್ಬಂದಿ ತುರ್ತಾಗಿಯೇ ಚಿಕಿತ್ಸೆ ನೀಡಿದ್ದಾರೆ.ನಾನೇ ಸ್ವತಃ
ನಾಲ್ಕು ಗಂಟೆಗಳ ಕಾಲ ಅಲ್ಲಿಯೇ ಇದ್ದೆ.ವೈದ್ಯರಿಗೆ ಧನ್ಯವಾದ ಹೇಳಿಯೂ ಬಂದಿದ್ದೇನೆ.ಕೆಲವು ಪಾಲಕರು ಸಿವಿಲ್ ಆಸ್ಪತ್ರೆಯ ಬದಲಾಗಿ ಖಾಸಗಿ ವೈದ್ಯರ ಮೊರೆ ಹೋಗಿದ್ದಾರಂತೆ.
ಮಳೆಗಾಲದಲ್ಲಿ ಬೀದಿ ನಾಯಿಗಳು ಕಚ್ಚುವ ಪ್ರಕರಣಗಳು ಹೆಚ್ಚೆಚ್ಚು ವರದಿಯಾಗುತ್ತವೆ.ಬೆಳಗಿನ ವಾಕಿಂಗ್ ಕಾಲಕ್ಕೆ ನನಗೂ ಕಚ್ಚಲು ಕೆಲವು ನಾಯಿಗಳು ಬಂದ ಉದಾಹರಣೆಗಳಿವೆ.ಬಗ್ಗಿ ಕಲ್ಲು
ಕಲ್ಲು ತೆಗೆದುಕೊಂಡಾಗ ಓಡಿ ಹೋಗಿವೆ.
25 ವರ್ಷಗಳ ಹಿಂದೆ ನಾಯಿ ಕಡಿತಕ್ಕೆ ಒಳಗಾದವರಿಗೆ ಹೊಕ್ಕಳದ ಸುತ್ತಲೂ14
ಚುಚ್ಚುಮದ್ದುಗಳನ್ನು ಕೊಡಲಾಗುತ್ತಿತ್ತು.ಅದು ತುಂಬಾ ಯಾತನಾಮಯವಾಗಿತ್ತು.ಈಗಹಾಗಿಲ್ಲ.ಈಗ ನೂರಕ್ಕೆ ನೂರರಷ್ಟು ಗುಣವಾಗಬಹುದಾದ ವೈದ್ಯಕೀಯ ಸೌಲಭ್ಯವಿದೆ.
ಬೀದಿ ನಾಯಿಗಳ ನಿಯಂತ್ರಣಕ್ಕೆ
ಮಹಾನಗರ ಪಾಲಿಕೆ ಮತ್ತು ಸ್ಮಾರ್ಟ ಸಿಟಿ ಏನಾದರೂ ಕಠಿಣ ಕ್ರಮಗಳನ್ನು
ಕೈಕೊಳ್ಳಲೇ ಬೇಕಾಗಿದೆ.
ಅಶೋಕ ಚಂದರಗಿ
ಅಧ್ಯಕ್ಷರು,ಬೆಳಗಾವಿ ಜಿಲ್ಲಾ
ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ
ಬೆಳಗಾವಿ 9620114466