ಮಾನ್ವಿ: ತಾಲ್ಲೂಕಿನ ಗಿಣವಾರ ಗ್ರಾಮದಿಂದ ಕಲ್ಲೂರು ಗ್ರಾಮದಲ್ಲಿನ ಹೊಲಕ್ಕೆ ಹತ್ತಿ ಬಿಡಿಸಲು ತೆರಳಿದ ಕೂಲಿ ಕಾರ್ಮಿಕರಿದ್ದ ಕ್ರೂಸರ್ ವಾಹನ ಮಾನ್ವಿ ರಾಯಚೂರು ರಸ್ತೆಯ ಬೊಮ್ಮನಾಳ್ ಕ್ರಾಸ್ ಬಳಿ ಪಲ್ಟಿ ಹೊಡೆದು 18 ಜನ ಗಾಯಗೊಂಡಿದ್ದು, ಒಬ್ಬ ಮಹಿಳೆ ಮೃತಪಟ್ಟಿದ್ದಾಳೆ.
ಗಿಣವಾರ ಗ್ರಾಮದ ನಿವಾಸಿ ಲಕ್ಷ್ಮಿದೇವಿ (45 ) ಮೃತಳು. 3 ಜನರಿಗೆ ಗಂಭೀರವಾದ ಗಾಯಗಳಾಗಿವೆ.
ಅಪಘಾತಕ್ಕೆ ಚಾಲಕನ ನಿರ್ಲಕ್ಷವೇ ಕಾರಣ ಎನ್ನಲಾಗುತ್ತಿದ್ದು, ಮಾನ್ವಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪಿ.ಐ.ಮಹದೇವಪ್ಪ ಪಂಚಮುಖಿ ತಿಳಿಸಿದ್ದಾರೆ.
Laxmi News 24×7