Breaking News

ವಿಧಾನ ಪರಿಷತ್ ಸದಸ್ಯೆ ಪಾಸ್ ದುರ್ಬಳಕೆ: ದೂರು ನೀಡಿದ ಮಗಳು

Spread the love

ಬೆಂಗಳೂರು: ವಿಧಾನಪರಿಷತ್ ಸದಸ್ಯೆ ತೇಜಸ್ವಿನಿ ಗೌಡ ಅವರ ಹೆಸರಿನಲ್ಲಿ ಪಾಸ್ ಸೃಷ್ಟಿಸಿಕೊಂಡು ದುರ್ಬಳಕೆ ಮಾಡಿಕೊಳ್ಳಲಾಗಿದ್ದು, ಈ ಸಂಬಂಧ ಅಶೋಕನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

‘ತೇಜಸ್ವಿನಿ ಗೌಡ ಅವರ ಮಗಳು ಬಿ.ಎಸ್. ಯಶಸ್ವಿನಿ ದೂರು ನೀಡಿದ್ದಾರೆ. ಹುಂಡೈ ಐ- 20 (ಕೆಎ 03 ಎಂವೈ 6331) ಕಾರಿನ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆತನನ್ನು ಪತ್ತೆ ಮಾಡಿ ವಿಚಾರಣೆ ನಡೆಸಬೇಕಿದೆ’ ಎಂದು ಪೊಲೀಸರು ಹೇಳಿದರು.

‘ತೇಜಸ್ವಿನಿ ಗೌಡ ಅವರು ಯಾರಿಗೂ ಪಾಸ್ ನೀಡಿಲ್ಲ. ಅಷ್ಟಾದರೂ ಅವರ ಹೆಸರಿನಲ್ಲಿ ಪಾಸ್‌ ಸೃಷ್ಟಿಸಿಕೊಂಡಿರುವ ಕಾರಿನ ಮಾಲೀಕ, ಅದನ್ನು ಕಾರಿನ ಮುಂಭಾಗದಲ್ಲಿ ಹಾಕಿಕೊಂಡಿದ್ದಾನೆ. ಸದಸ್ಯೆ ಹೆಸರಿಗೆ ಧಕ್ಕೆ ತರುತ್ತಿದ್ದಾನೆಂದು ಆರೋಪಿಸಲಾಗಿದೆ’ ಎಂದೂ ತಿಳಿಸಿದರು.


Spread the love

About Laxminews 24x7

Check Also

ಅಸ್ಸಾಂ, ತಮಿಳುನಾಡು, ಕೇರಳಕ್ಕೆ ಏ.9 ರಂದು ಚುನಾವಣೆ – ಮೇ 4 ರಂದು ಫಲಿತಾಂಶ

Spread the loveನವದೆಹಲಿ: 4 ರಾಜ್ಯ  ಮತ್ತು 1 ಕೇಂದ್ರಾಡಳಿತ ಪ್ರದೇಶದ ಚುನಾವಣೆಗೆ ಮುಹೂರ್ತ ಫಿಕ್ಸ್‌ ಆಗಿದೆ. ಅಸ್ಸಾಂ, ತಮಿಳುನಾಡು,ಕೇರಳ, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ