Breaking News

ಹೀಗೆ ಹಲ್ಲು ಕಿರಿದು ನಿಂತಿರೋ ಆಸಾಮಿ ಮಾಡಿದ್ದೇನು ಗೊತ್ತೇ..?

Spread the love

ದಾವಣಗೆರೆ: ಲಾಕ್‍ಡೌನ್ ನಡುವೆಯೂ ದಾವಣಗೆರೆ ಪಾಲಿಕೆ ಮೇಯರ್ ಹುಟ್ಟುಹಬ್ಬವನ್ನು ಆಚರಿಸಿಕೊಂಡು ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆ.

ದಾವಣಗೆರೆಯ ಮಹಾನಗರ ಪಾಲಿಕೆ ಮೇಯರ್ ಅಜಯ್ ಕುಮಾರ್ ಇಂದು ಲಾಕ್‍ಡೌನ್ ನಡುವೆ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದಾರೆ. ಮಹಾನಗರ ಪಾಲಿಕೆಯ ಮೇಯರ್ ಕಚೇರಿಯಲ್ಲಿ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದು, ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಲಾಕ್‍ಡೌನ್ ನಡುವೆಯೂ ಪಾಲಿಕೆ ಅವರಣಕ್ಕೆ ಬಂದಿರುವ ಮೇಯರ್ ಅಜಯ್ ಕುಮಾರ್ ಅಭಿಮಾನಿಗಳು ಹಾಗೂ ಪಾಲಿಕೆ ಸದಸ್ಯರು ಗುಂಪು ಗುಂಪಾಗಿ ಬಂದು ಮೇಯರ್ ಗೆ ಶುಭಾಶಯ ಕೋರಿದ್ದಾರೆ. ಈ ವೇಳೆ ಸಂಡೇ ಲಾಕ್‍ಡೌನ್ ವೇಳೆ ಹುಟ್ಟುಹಬ್ಬ ಬೇಕಿತ್ತಾ ಎಂದು ವಿಡಿಯೋ ಮಾಡಿ ಪ್ರಶ್ನಿಸಿದವರಿಗೇ ವ್ಯಂಗ್ಯವಾಗಿ ಉತ್ತರ ನೀಡಿರುವ ಮೇಯರ್ ಇನ್ನೂ ಹೈಲೈಟ್ ಮಾಡಲಿ ಬಿಡಿ ಎಂದು ಉಡಾಫೆಯಾಗಿ ಮಾತನಾಡಿದ್ದಾರೆ.

ಈ ವಿಚಾರವಾಗಿ ದಾವಣಗೆರೆ ಎಸ್‍ಪಿ, ಲಾಕ್‍ಡೌನ್ ನಿಯಮ ಉಲ್ಲಂಘಿಸಿ ಹುಟ್ಟುಹಬ್ಬ ಆಚರಿಸಿಕೊಂಡ ಮೇಯರ್ ಅಜಯ್ ಕುಮಾರ್ ವಿರುದ್ಧ ತಕ್ಷಣವೇ ಎಫ್‍ಐಆರ್ ದಾಖಲು ಮಾಡಲಾಗುವುದು ಎಂದು ಹೇಳಿದ್ದಾರೆ.


Spread the love

About Laxminews 24x7

Check Also

ಬೀದರ್-ಹುಮನಾಬಾದ್ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತಲ್ಲಿ ನಾಲ್ವರು ಮೃತಪಟ್ಟಿದ್ದಾರೆ.

Spread the loveಬೀದರ್: ಕಾರು ಹಾಗೂ ಗೂಡ್ಸ್ ವಾಹನದ ಮಧ್ಯೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಮೃತಪಟ್ಟ ದಾರುಣ ಘಟನೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ