Breaking News

ಮಾರಲು ಇನ್ಯಾವ ಆಸ್ತಿಯ ಪಟ್ಟಿ ನೋಡುತ್ತಿದ್ದೀರಿ?: ಮೋದಿಗೆ ಕಾಂಗ್ರೆಸ್‌ ಪ್ರಶ್ನೆ

Spread the love

ಬೆಂಗಳೂರು: ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ವಿಮಾನದಲ್ಲಿ ಪ್ರಯಾಣಿಸುವಾಗ ಕಡತಗಳನ್ನು ಪರಿಶೀಲಿಸುತ್ತಿರುವ ಫೊಟೋಗೆ ಕಮೆಂಟ್‌ ಮಾಡಿರುವ ಕರ್ನಾಟಕ ಕಾಂಗ್ರೆಸ್‌, ‘ಫೋಟೋ ಶೂಟ್‌ ಚೆನ್ನಾಗಿದೆ ನರೇಂದ್ರ ಮೋದಿ ಅವರೇ, ಆದರೆ ಲೈಟಿಂಗ್‌ ಕಳಪೆಯಾಗಿದೆ!’ ಎಂದು ಛೇಡಿಸಿದೆ.

‘ಟಾರ್ಚ್‌ ಬೆಳಕು ಬಳಸುವ ಬದಲು ನಿಮ್ಮ ಹೊಚ್ಚ ಹೊಸ 8,500 ಕೋಟಿ ಬೆಲೆಯ ವಿಮಾನದಲ್ಲಿ ಫೋಟೋಶೂಟ್‌ಗಾಗಿಯೇ ಪ್ರತ್ಯೇಕ ಲೈಟಿಂಗ್‌ ವ್ಯವಸ್ಥೆ ಮಾಡಿಕೊಳ್ಳಿ!’ ಎಂದು ಕಾಂಗ್ರೆಸ್‌ ಮೋದಿ ಅವರಿಗೆ ವ್ಯಂಗ್ಯದ ಸಲಹೆ ನೀಡಿದೆ.

‘ಅಂದ ಹಾಗೆ ಮಾರಲು ದೇಶದ ಇನ್ಯಾವ ಆಸ್ತಿಯ ಪಟ್ಟಿ ನೋಡುತ್ತಿದ್ದೀರಿ?’ ಎಂದು ಕಾಂಗ್ರೆಸ್‌ ಪ್ರಧಾನಿ ಅವರ ಕಾಲೆಳೆದು ಟ್ವೀಟ್‌ ಮಾಡಿದೆ.

ಇದೇ ಸಂದರ್ಭ ವಾಷಿಂಗ್ಟನ್‌ನಲ್ಲಿ ವಿಮಾನದಿಂದ ಮೆಟ್ಟಿಲುಗಳ ಮೂಲಕ ಇಳಿಯುವಾಗ ಛತ್ರಿ ಏರಿಸಿಕೊಂಡು ಬಂದಿದ್ದಕ್ಕೂ ಕಮೆಂಟ್‌ ಮಾಡಿರುವ ಕಾಂಗ್ರೆಸ್‌, ‘ನಮ್ಮ ಪ್ರಧಾನಿಗೆ ವಿದೇಶಿಯರೆದುರು ನಗೆಪಾಟಲಿಗೆ ಈಡಾಗುವುದು ಅಭ್ಯಾಸವಾಗಿಬಿಟ್ಟಿದೆ’ ಎಂದಿದೆ.


Spread the love

About Laxminews 24x7

Check Also

ಬಜೆಟ್ 2026 – ಕರ್ನಾಟಕದಲ್ಲಿ 12 ಹೊಸ ಪೊಲೀಸ್ ಠಾಣೆ

Spread the love ಬೆಂಗಳೂರು: ರಾಜ್ಯದಲ್ಲಿ 12 ನೂತನ ಪೊಲೀಸ್ ಠಾಣೆ ಸ್ಥಾಪನೆಗೆ ರಾಜ್ಯ ಸರ್ಕಾರ ಮುಂದಾಗಿದೆ. ದಾಖಲೆಯ 17ನೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ