Breaking News

ಡ್ರಗ್ಸ್​ ‘ಸುಳಿ’ಯಲ್ಲಿ ರಾಣಾ ದಗ್ಗುಬಾಟಿ.. ED ಮುಂದೆ ಹಾಜರ

Spread the love

ಬಾಹುಬಲಿ ನಟಿ, ಟಾಲಿವುಡ್​ ಸ್ಟಾರ್​ ರಾಣಾ ದಗ್ಗುಬಾಟಿ ಇಂದು ಜಾರಿ ನಿರ್ದೇಶನಾಲಯ (ಇ.ಡಿ) ಎದುರು ಹಾಜರಾಗಿದ್ದಾರೆ.

2017ರ ಡ್ರಗ್ಸ್​ ಪ್ರಕರಣದ ಸಂಬಂಧ ರಾಣಾ ವಿಚಾರಣೆಗೆ ಎದುರಾಗಿದ್ದು, ಹೈದರಾಬಾದ್​​ನ ಇ.ಡಿ ಕಚೇರಿಗೆ ಇಂದು ಬೆಳಗ್ಗೆ ಆಗಮಿಸಿದರು. ಇ.ಡಿ ಅಧಿಕಾರಿಗಳು ಟಾಲಿವುಡ್​​ನ ಹಲವು ನಟ ನಟಿಯರಿಗೆ ಪ್ರಕರಣದ ಸಂಬಂಧ ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದರು.

ವರದಿಗಳ ಅನ್ವಯ 2017ರಲ್ಲಿ ಎಸ್​​​ಐಟಿ ವಿಚಾರಣೆ ನಡೆಸಿದ ಸಂದರ್ಭದಲ್ಲಿ ರಾಣಾ ವಿಚಾರಣೆಗೆ ಹಾಜರಾಗಿರಲಿಲ್ಲ. ಅಲ್ಲದೇ ಸಾಕ್ಷಿ ಆಧಾರಗಳ ಕೊರತೆಯಿಂದ ಎಸ್​​ಐಟಿ ಪೊಲೀಸರು ಕೂಡ ಯಾವುದೇ ಸ್ಟಾರ್ ನಟ, ನಟಿಯರ ಹೆಸರನ್ನು ಚಾರ್ಜ್​​ ಶೀಟ್​ನಲ್ಲಿ ಉಲ್ಲೇಖ ಮಾಡಿರಲಿಲ್ಲ ಎನ್ನಲಾಗಿದೆ. ಇನ್ನು ಪ್ರಕರಣ ಸಂಬಂಧ ವಿಚಾರಣೆಗೆ ಆರಂಭ ಮಾಡಿದ ಇ.ಡಿ ಸೆ.2 ರಿಂದ 22ರ ನಡುವೆ ವಿಚಾರಣೆಗೆ ಹಾಜರಾಗಲು ನೋಟಿಸ್​ ನೀಡಿದೆ. ಇದರಂತೆ ರಾಕುಲ್​ ಪ್ರೀತ್​ ಸಿಂಗ್​ ಸೆ.6 ರಂದು ಹಾಜರಾಗಿದ್ದರು. ಸೆ.9 ರಂದು ರಜಿತೇಜ ವಿಚಾರಣೆಗೆ ಆಗಮಿಸಬೇಕಿದೆ.

 

 

ಏನಿದು 2017ರ ಡ್ರಗ್ಸ್ ಪ್ರಕರಣ?
2017ರ ಜೂನ್​​ನಲ್ಲಿ ಹೈದರಾಬಾದ್ ಪೊಲೀಸರು ಬಹುದೊಡ್ಡ ಡ್ರಗ್ಸ್​ ರಾಕೆಟ್​ ದಂಧೆಯನ್ನು ಬೆಳಕಿಗೆ ತಂದಿದ್ದರು. ಇದರಲ್ಲಿ ಸುಮಾರು 1 ಸಾವಿರಕ್ಕೂ ಹೆಚ್ಚು ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಡ್ರಗ್ಸ್​ ಸೇವನೆ ಮಾಡುತ್ತಿದ್ದದ್ದು ಖಚಿತವಾಗಿತ್ತು.

ಅಲ್ಲದೇ ಆರೋಪಿಗಳು ವಿದ್ಯಾರ್ಥಿಗಳು ಮಾತ್ರವಲ್ಲದೇ ಸಮಾಜದಲ್ಲಿ ಗಣ್ಯ ವ್ಯಕ್ತಿಗಳು ಎಂದು ಗುರುತಿಸಿಕೊಂಡಿದ್ದ ವ್ಯಕ್ತಿಗಳು ಡ್ರಗ್ಸ್ ಪೂರೈಕೆ ಮಾಡಿರುವುದು ಕಂಡು ಬಂದಿತ್ತು. ಇದರಲ್ಲಿ ಟಾಲಿವುಡ್​ನ ಹಲವು ನಟ-ನಟಿಯರ ಹೆಸರು ಕೇಳಿ ಬಂದಿತ್ತು. ಸದ್ಯ ಡ್ರಗ್ಸ್ ಖರೀದಿಯಲ್ಲಿ ಅಕ್ರಮ ಹಣ ವರ್ಗಾವಣೆಯಾಗಿರುವ ಆರೋಪ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಇ.ಡಿ ಕೂಡ ಎಂಟ್ರಿ ಕೊಟ್ಟಿತ್ತು.


Spread the love

About Laxminews 24x7

Check Also

ಚಿಕ್ಕೋಡಿ ಪ್ರತ್ಯೇಕ ಜಿಲ್ಲೆಗಾಗಿ ವಿವಿಧ ಮಠಾಧೀಶರ ನೇತೃತ್ವದಲ್ಲಿ ಮಹತ್ವದ ಸಭೆ

Spread the love ಚಿಕ್ಕೋಡಿ: ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಚಿಕ್ಕೋಡಿಯನ್ನು ಪ್ರತ್ಯೇಕ ಜಿಲ್ಲೆ ಎಂದು ಘೋಷಿಸುವಂತೆ ಆಗ್ರಹಿಸಿ ಚಿಕ್ಕೋಡಿ ಜಿಲ್ಲಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ