ಕಲಬುರಗಿ: ಮನೆ ಮಹಡಿಯಿಂದ ಕೆಳಗಡೆ ಬಿದ್ದು ಬ್ರೈನ್ ಡೆಡ್ ಆಗಿರುವ ಯುವಕನ ಅಂಗಾಂಗವನ್ನು ಪೋಷಕರು ದಾನ ಮಾಡಿದ್ದು, ಶನಿವಾರ ಹೈದರಾಬಾದ್ ಮೂಲಕ ಬೆಂಗಳೂರಿಗೆ ಯುವಕನ ‘ಲಿವರ್’ ಅನ್ನು ಏರ್ ಲಿಫ್ಟ್ ಮಾಡಲಾಗಿದೆ.
ಇಲ್ಲಿನ ಖೂಬಾ ಪ್ಯಾಟ್ ನಿವಾಸಿ, 19 ವರ್ಷದ ಯುವಕ ಆಯ ತಪ್ಪಿ ಮನೆ ಮಹಡಿಯಿಂದ ಕೆಳಗಡೆ ಬಿದ್ದು ಗಾಯಗೊಂಡಿದ್ದ. ಕಳೆದ 7 ದಿನಗಳಿಂದ ಚಿಕಿತ್ಸೆ ನಡೆಯುತ್ತಿದ್ದರೂ ಸುಧಾರಿಸಿಕೊಳ್ಳದ ಕಾರಣ ಹಾಗೂ ಬ್ರೈನ್ ಡೆಡ್ ಹಿನ್ನಲೆ ಅಂಗಾಂಗ ದಾನಕ್ಕೆ ಪಾಲಕರು ನಿರ್ಧರಿಸಿದ್ದರು.
ಹೀಗಾಗಿ ನಗರದ ಚಿರಾಯು ಆಸ್ಪತ್ರೆಯಿಂದ ಹೈದರಾಬಾದ್ ಗೆ ಜಿರೋ ಟ್ರಾಫಿಕ್ ನಲ್ಲಿ ಲಿವರ್ ರವಾನೆ ಮಾಡಲಾಯಿತು. ಹೈದರಾಬಾದ್ ನಿಂದ ಬೆಂಗಳೂರಿಗೆ ಏರ್ ಲಿಫ್ಟ್ ಮಾಡಲಾಗುತ್ತದೆ. ಜೆ.ಪಿ.ನಗರದಲ್ಲಿರುವ ಆಸ್ಟರ್ ಆರ್.ವಿ ಆಸ್ಪತ್ರೆಗೆ ಲಿವರ್ ರವಾನಿಸಲಾಗುತ್ತದೆ.
ಯುವಕನ ಕಿಡ್ನಿ ಮತ್ತು ಕಣ್ಣು ಕೂಡ ದಾನ ಮಾಡಲಾಗಿದೆ. ಬಸವೇಶ್ವರ ಆಸ್ಪತ್ರೆಯಲ್ಲಿ ಕಣ್ಣು ಹಾಗೂ ಚಿರಾಯು ಆಸ್ಪತ್ರೆಗೆ ಕಿಡ್ನಿ ಕಸಿ ಮಾಡಲಾಗುತ್ತದೆ.
Laxmi News 24×7