ಬೆಳಗಾವಿ: ಜಿಲ್ಲೆಯಲ್ಲಿ ಇಂದು 54 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಮೂವರು ಬಲಿಯಾಗಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೋಮವಾರ ಸಂಜೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿ ಮಾಹಿತಿ ನೀಡಿದ್ದು, ಇಂದು ಒಂದೇ ದಿನ 90 ಜನರು ಕೊರೊನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಬೆಳಗಾವಿಯ ಇಬ್ಬರು ಹಾಗೂ ಸವದತ್ತಿ ತಾಲೂಕಿನ ಒಬ್ಬ ಒಟ್ಟು ಮೂವರು ಸಾವನ್ನಪ್ಪಿದ್ದು, ಇದವರೆಗೆ ಜಿಲ್ಲೆಯಲ್ಲಿ
ಬೆಳಗಾವಿ ತಾಲೂಕಿನಲ್ಲಿ 20, ಗೋಕಾಕನಲ್ಲಿ 10, ಸವದತ್ತಿ 2, ರಾಮದುರ್ಗ 4, ಹುಕ್ಕೇರಿ 2, ರಾಯಬಾಗ 2, ಬೈಲಹೊಂಗಲ 6 ಮತ್ತು ಚಿಕ್ಕೋಡಿಯಲ್ಲಿ 7 ಪ್ರಕರಣಗಳು ಪತ್ತೆಯಾಗಿವೆ.
5463 ಸೋಂಕಿತರ ಪೈಕಿ 2194 ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಇನ್ನು ರಾಜ್ಯದಲ್ಲಿ 4,267 ಹೊಸ ಪ್ರಕರಣ ಪತ್ತೆಯಾಗಿದ್ದು, 114 ಮಂದಿ ಮೃತಪಟ್ಟಿದ್ದಾರೆ. ಬೆಂಗಳೂರಿನಲ್ಲಿ 1,243 ಸೋಂಕಿತರು ಪತ್ತೆಯಾಗಿದ್ದಾರೆ.
Laxmi News 24×7