Breaking News

ಕಾನೂನು ಹೋರಾಟದಲ್ಲಿ ರಿಲಯನ್ಸ್‌ ವಿರುದ್ಧ ಅಮೆಜಾನ್‌ಗೆ ಜಯ

Spread the love

ನವದೆಹಲಿ: ಭಾರತದ ಆನ್‌ಲೈನ್‌ ವ್ಯಾಪಾರದ ಪ್ರತಿ ಸ್ಪರ್ಧಿಗಳಾದ ಮುಕೇಶ್‌ ಅಂಬಾನಿ ಮತ್ತು ಜೆಫ್ ಬೆಜೋಸ್‌ ನಡುವಿನ ಕಾನೂನು ಹೋರಾಟದಲ್ಲಿ ಜೆಫ್ ಗೆ ಜಯದಕ್ಕಿದೆ.

ಫ್ಯೂಚರ್‌ ಗ್ರೂಪ್‌ನ ರಿಟೇಲ್‌ ಆಸ್ತಿಯನ್ನು ಖರೀದಿಸುವ 3.4 ಶತ ಕೋಟಿ ಡಾಲರ್‌ ಮೊತ್ತದ ಒಪ್ಪಂದವನ್ನು ರಿಲಯನ್ಸ್‌ ಕಂಪನಿ ಮುಂದುವರಿ ಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ಶುಕ್ರವಾರ ಹೇಳಿದೆ.

ಇದರಿಂದಾಗಿ ಅಮೆಜಾನ್‌ಗೆ ದೊಡ್ಡ ಯಶಸ್ಸುಸಿಕ್ಕಂತಾಗಿದೆ. ತನ್ನ ಪಾಲುದಾರ ಸಂಸ್ಥೆ ಫ್ಯೂಚರ್‌ ಗ್ರೂಪ್‌ ವಿರುದ್ಧ ಅಮೆಜಾನ್‌ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು. ತನ್ನ ರಿಟೇಲ್‌ ಆಸ್ತಿಗಳನ್ನು ರಿಲಯನ್ಸ್‌ಗೆ ಮಾರಾಟ ಮಾಡಲು ಒಪ್ಪುವ ಮೂಲಕ ಫ್ಯೂಚರ್‌ ಗ್ರೂಪ್‌ ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ಅಮೆಜಾನ್‌ ಆರೋಪಿಸಿತ್ತು. 2020ರ ಅಕ್ಟೋಬರ್‌ನಲ್ಲಿ ಸಿಂಗಾಪುರದ ತುರ್ತು ಮಧ್ಯಸ್ಥಿಕೆ ನ್ಯಾಯಾಲಯ ಕೂಡ ರಿಲ ಯನ್ಸ್‌ ಜೊತೆ ಫ್ಯೂಟರ್‌ ರಿಟೇಲ್‌ ವಿಲೀನ ಆಗುವಂತಿಲ್ಲ ಎಂದು ತೀರ್ಪು ನೀಡಿತ್ತು.

ಈಗ ಸುಪ್ರೀಂ ಕೋರ್ಟ್‌, ವಿದೇಶವೊಂದರ ನ್ಯಾಯಾಧಿಕ ರಣ ನೀಡಿರುವ ತೀರ್ಪನ್ನು ಭಾರತದ ಕಾನೂನಿನ ಅನ್ವಯ ಜಾರಿ ಮಾಡಲು ಸಾಧ್ಯ ಎಂದು ಹೇಳಿದೆ.


Spread the love

About Laxminews 24x7

Check Also

ಯರಗಟ್ಟಿ ತಾಲ್ಲೂಕಿನಿಂದ ಅವಿರೋಧವಾಗಿ ಆಯ್ಕೆ ನಿಮ್ಮ ನಂಬಿಕೆ ಉಳಿಸಿಕೊಂಡು, ತಾಲ್ಲೂಕಿನ ರೈತರು ಮತ್ತು ಸಹಕಾರಿ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ

Spread the loveಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ (BDCC) ಬ್ಯಾಂಕ್‌ನ ನಿರ್ದೇಶಕರ ಸ್ಥಾನಕ್ಕೆ ಯರಗಟ್ಟಿ ತಾಲ್ಲೂಕಿನಿಂದ ಅವಿರೋಧವಾಗಿ ಆಯ್ಕೆಯಾಗಲು ಕಾರಣರಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ