ದೆಹಲಿ: ತಾನು ವಿಧಿಸಿದ್ದ ನಿಯಮಗಳನ್ನು ಪದೇ ಪದೆ ಉಲ್ಲಂಘಿಸುತ್ತಿದ್ದ ಹಿನ್ನೆಲೆಯಲ್ಲಿ Paytm ಆ್ಯಪ್ವನ್ನು ಗೂಗಲ್ ಪ್ಲೇ ಸ್ಟೋರ್ನಿಂದ ತೆಗೆಯಲಾಗಿದೆ. ಆದರೆ, ಉಳಿದ ಌಪ್ಗಳಾದ Paytm ಫಾರ್ ಬ್ಯುಸಿನೆಸ್, Paytm ಮಾಲ್ ಹಾಗೂ Paytm ಮನಿಗಳನ್ನು ಪ್ಲೇ ಸ್ಟೋರ್ನಲ್ಲಿ ಹಾಗೇ ಉಳಿಸಿಕೊಳ್ಳಲಾಗಿದೆ.
Paytmನ ಪ್ಲೇ ಸ್ಟೋರ್ನಿಂದ ತೆಗೆಯಲು ಗೂಗಲ್ ಸಂಸ್ಥೆಯು ಯಾವುದೇ ಅಧಿಕೃತ ಕಾರಣ ಅಥವಾ ಮಾಹಿತಿ ನೀಡಿಲ್ಲ. ಆದರೆ, ಕೆಲ ಮೂಲಗಳ ಪ್ರಕಾರ ಗೂಗಲ್ ಸಂಸ್ಥೆಯ ಜೂಜು ವಿರೋಧಿ ನಿಯಮಾವಳಿಗಳನ್ನು Paytm ಉಲ್ಲಂಘಿಸಿರುವುದರಿಂದ ಈ ನಿರ್ಧಾರ ಕೈಗೊಂಡಿದೆ ಎಂದು ತಿಳಿದುಬಂದಿದೆ.
ಈ ಕುರಿತು Paytm ಌಪ್ ಸಂಸ್ಥೆಯು ಪ್ರತಿಕ್ರಿಯಿಸಿದ್ದು ಈ ವಿಚಾರವನ್ನು ಆದಷ್ಟು ಬೇಗ ಬಗೆಹರಿಸುತ್ತೇವೆ. ನಿಮ್ಮ ಹಣ ಸುರಕ್ಷಿತವಾಗಿದೆ ಎಂದು ಅದರ ಬಳಕೆದಾರರಿಗೆ ಆಶ್ವಾಸನೆ ನೀಡಿದೆ.ಆದರೆ ಪ್ಲೇ ಸ್ಟೋರ್ ನಲ್ಲಿ ಪೇಟಿಎಂ ಫೊರ್ ಬ್ಯುಸಿನೆಸ್, ಪೇಟಿಎಂ ಫೊರ್ ಮನಿ ಹಾಗು ಪೇಟಿಎಂಗೆ ಸಂಬಂಧಿಸಿದ ಇತರ ಆ್ಯಪ್ ಗಳು ಈಗಲೂ ಲಭ್ಯವಿದೆ.