Breaking News

ಭಾರತೀಯರು ಎಲ್ಲಿ ಬೇಕಾದ್ರೂ ಜಯಿಸ್ತಾರೆ ಅನ್ನೋದಕ್ಕೆ ನೀವು ಮಾದರಿ – ಪ್ರಜ್ಞಾನಂದ ಕುಟುಂಬ ಭೇಟಿ ಮಾಡಿದ

Spread the love

ನವದೆಹಲಿ: ಅಜರ್​​ಬೈಜಾನ್​​ನ ಬಾಕುವಿನಲ್ಲಿ ನಡೆದ ಚೆಸ್​​ ವಿಶ್ವಕಪ್-2023 ಫೈನಲ್‌ನ (Chess World Cup Final 2023) ಟೈ ಬ್ರೇಕರ್​​ನಲ್ಲಿ ಅಮೋಘ ಪ್ರದರ್ಶನದ ಹೊರತಾಗಿಯೂ ವಿರೋಚಿತ ಸೋಲನುಭವಿಸಿದ ಚೆಸ್‌ ಯುವ ಗ್ರ್ಯಾಂಡ್​ ಮಾಸ್ಟರ್​ ಭಾರತದ ಆರ್​.ಪ್ರಜ್ಞಾನಂದ (Praggnanandhaa) ಅವರನ್ನ ಪ್ರಧಾನಿ ನರೇಂದ್ರ ಮೋದಿ (Narendra Modi) ಅಭಿನಂದಿಸಿದ್ದಾರೆ.

ಪ್ರಜ್ಞಾನಂದಗೆ ವಿಶೇಷ ಸಂದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಈ ವೇಳೆ ಪ್ರಜ್ಞಾನಂದ ಕುಟುಂಬವನ್ನ ಭೇಟಿ ಮಾಡಿದ ಪ್ರಧಾನಿ ಮೋದಿ, ಕುಟುಂಬದೊಂದಿಗೆ ನಿಮ್ಮನ್ನ ಭೇಟಿಯಾಗಿದ್ದು ತುಂಬಾ ಖುಷಿಯಾಯಿತು. ನಿಮ್ಮ ಉತ್ಸಾಹ ಹಾಗೂ ಪರಿಶ್ರಮವನ್ನ ನಿರೂಪಿಸಿದ್ದೀರಿ, ಭಾರತದ ಯುವಕರು ಎಲ್ಲಿ ಬೇಕಾದ್ರೂ ಜಯಿಸುತ್ತಾರೆ ಎಂಬುದಕ್ಕೆ ನೀವು ಮಾದರಿಯಾಗಿದ್ದೀರಿ, ನಿಮ್ಮ ಮೇಲೆ ಸಾಕಷ್ಟು ಹೆಮ್ಮೆಯಿದೆ ಎಂದು ಶ್ಲಾಘಿಸಿದ್ದಾರೆ. ಪ್ರಜ್ಞಾನಂದ ಸಹ ಪ್ರಧಾನಿ ಮೋದಿ ಪ್ರತಿಕ್ರಿಯೆಗೆ ಧನ್ಯವಾದ ಸಲ್ಲಿಸಿದ್ದಾರೆ.


Spread the love

About Laxminews 24x7

Check Also

ಜನರಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯದಿದ್ದರೆ, ಕೇವಲ ಮೌಢ್ಯ ನಿಷೇಧ ಕಾನೂನಿನ ಮೂಲಕ ನಿರೀಕ್ಷಿತ ಬದಲಾವಣೆ ಸಾಧ್ಯವಿಲ್ಲ ಎಂದ ಸಿಎಂ

Spread the loveಬೆಂಗಳೂರು: ”ದ್ವಿಭಾಷಾ ಸೂತ್ರ ನನ್ನ ಅಭಿಪ್ರಾಯವಾಗಿದೆ. ಅದನ್ನು ಸರ್ಕಾರದ ಅಭಿಪ್ರಾಯ ಮಾಡುವ ದಿಕ್ಕಿನಲ್ಲಿ ಪ್ರಯತ್ನಿಸುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ