Breaking News

ಎಚ್ಚರ. ಮನೆಗಳ ಸಿಸಿಟಿವಿ ದೃಶ್ಯಗಳಿಗೂ ಹ್ಯಾಕರ್‌ಗಳ‌ ಕನ್ನ!

Spread the love

ಕೊಚ್ಚಿ: ಇತ್ತೀಚೆಗೆ ಭದ್ರತೆಯ ಸಲುವಾಗಿ ಮನೆಗಳಲ್ಲಿ “ಕ್ಲೋಸ್ಡ್ ಸರ್ಕ್ನೂಟ್‌ ಕೆಮರಾ’ಗಳನ್ನು (ಸಿಸಿ ಕೆಮರಾ) ಹಾಕಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಇದೇ ವೇಳೆ, ಹ್ಯಾಕರ್‌ಗಳ ಸಂಖ್ಯೆಯೂ ಗಣನೀಯವಾಗಿ ಹೆಚ್ಚುತ್ತಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಕೆಲವು ಮನೆಗಳಲ್ಲಿ ಸುತ್ತಲಿನ ವಿದ್ಯಮಾನ ಗಮನಿಸಲು ಮನೆಯ ಮುಖ್ಯ ಬಾಗಿಲಿನ ಮುಂದೆ, ಗೇಟ್‌ ಹಾಗೂ ಇತರ ಆಯ್ದ ಕಡೆಗಳಿಗೆ ಸಿಸಿ ಕೆಮರಾ ಅಳವಡಿಸಿದರೆ, ಇನ್ನೂ ಕೆಲವರು ಮಕ್ಕಳ ಚಟುವಟಿಕೆಗಳನ್ನು ಗಮನಿಸಲು ಮನೆಯ ಒಳಾಂಗಣಗಳಲ್ಲಿ ಕೆಮರಾಗಳನ್ನು ಅಳವಡಿಸುತ್ತಾರೆ. ಬಹುತೇಕ ಕಡೆ, ಸಿಸಿ ಕೆಮರಾಗಳನ್ನು ತಯಾರಿಸಿದ ಕಂಪೆನಿಗಳು ಬಹುತೇಕ ಗ್ರಾಹಕರಿಗೆ ಒಂದೇ ಪಾಸ್‌ವರ್ಡ್‌ ನೀಡಿರುತ್ತಾರೆ. ಇನ್ನೂ ಕೆಲವು ಗ್ರಾಹಕರು ಸ್ವಂತ ಪಾಸ್‌ವರ್ಡ್‌ ರಚಿಸುವಾಗ ದುರ್ಬಲ ಪಾಸ್‌ವರ್ಡ್‌ಗಳನ್ನು ಸೃಷ್ಟಿಸುತ್ತಾರೆ
ಈ ಎರಡೂ ಕಾರಣ ಗಳಿಂದ, ಹ್ಯಾಕರ್‌ಗಳಿಗೆ ಸಿಸಿ ಕೆಮರಾದ ಪಾಸ್‌ವರ್ಡ್‌ಗಳನ್ನು ಕದ್ದು ಮನೆಗಳ ಒಳಾಂಗಣದ ದೃಶ್ಯಾವಳಿಗಳನ್ನು ಕಾಪಿ ಮಾಡುವ ಸಾಧ್ಯತೆಗಳಿರುತ್ತವೆ. ಹಾಗಾಗಿ ಬಲಯುತವಾಗಿರುವ ಪಾಸ್‌ವರ್ಡ್‌ ರಚಿಸಬೇಕೆಂದು ತಜ್ಞರು ತಿಳಿಸಿದ್ದಾರೆ.


Spread the love

About Laxminews 24x7

Check Also

ಪಾಂಗುಳ ಗಲ್ಲಿಯ ರಸ್ತೆಯಲ್ಲಿ ಸ್ಟಾಲ್ ವಾಹನಗಳ ದ್ವಿಮುಖ ಪಾರ್ಕಿಂಗ್‌ನಿಂದಾಗಿ ಸಂಚಾರ ಸಮಸ್ಯೆ!!

Spread the love ಪಾಂಗುಳ ಗಲ್ಲಿಯ ರಸ್ತೆಯಲ್ಲಿ ಸ್ಟಾಲ್ ವಾಹನಗಳ ದ್ವಿಮುಖ ಪಾರ್ಕಿಂಗ್‌ನಿಂದಾಗಿ ಸಂಚಾರ ಸಮಸ್ಯೆ!! ಗಣೇಶೋತ್ಸವ ಕೇವಲ ಎಂಟು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ