ಗೋಕಾಕ: ಕಳೆದ ದಿ.22 ರಂದು ನಡೆದ ಗ್ರಾಮ ಪಂಚಾಯತಿಗಳ ಚುನಾವಣೆಯ ಮತಗಳ ಏಣಿಕೆ ಕಾರ್ಯ ದಿ. 30 ರಂದು ನಗರದ ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಜರುಗಲಿದ್ದು ಅದರ ನಿಮಿತ್ಯವಾಗಿ ಶುಕ್ರವಾರದಂದು ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಮತ ಏಣಿಕೆ ಕಾರ್ಯಕ್ಕೆ ನಿಯೋಜಿಸಿರುವ ಏಣಿಕೆ ಮೇಲ್ವಿಚಾರಕರಿಗೆ ಹಾಗೂ ಸಿಬ್ಬಂದಿಗೆ ಒಂದು ದಿನದ ತರಬೇತಿಥಿಟಿಜಿಟಿu ತಹಶೀಲದಾರ ಪ್ರಕಾಶ ಹೊಳೆಪ್ಪಗೋಳ ಅವರ ಅಧ್ಯಕ್ಷತೆಯಲ್ಲಿ ನೀಡಲಾಯಿತು.
ನಂತರ ಪತ್ರಿಕೆಯೊಂದಿಗೆ ಮಾತನಾಡಿದ ತಹಶೀಲದಾರ ಪ್ರಕಾಶ ಹೊಳೆಪ್ಪಗೋಳ ಅವರು, ದಿ. 30 ರಂದು ಒಟ್ಟು 12 ಕೊಠಡಿಗಳಲ್ಲಿ ಏಣಿಕೆ ಕಾರ್ಯ ನಡೆಯಲಿದ್ದು, 69 ಏಣಿಕೆ ಮೇಲ್ವಿಚಾರಕರು, 138 ಏಣಿಕೆ ಸಿಬ್ಬಂದಿಗಳನ್ನು ನೇಮಿಸಲಾಗಿದ್ದು, ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಸೂಕ್ತ ಪೋಲಿಸ್ ಬಂದೋಬಸ್ತ ಸೇರಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಮತದಾನದ ಗೌಪ್ಯತೆ ಉಲ್ಲಂಘನೆ ಎಫ್‍ಆಯ್‍ಆರ್ ದಾಖಲು: ಗ್ರಾಮ ಪಂಚಾಯತ ಚುನಾವಣೆಯ ಮತದಾನ ವೇಳೆಯಲ್ಲಿ ಮತದಾನ ಗೌಪ್ಯತೆಯನ್ನು ಉಲ್ಲಂಘನೆ ಮಾಡಿದ್ದಕ್ಕಾಗಿ ತಾಲೂಕಿನ ಪಾಮಲದಿನ್ನಿ ಗ್ರಾಮದ ವ್ಯಕ್ತಿಯ ವಿರುದ್ಧ ಜನತಾ ಪ್ರಾತಿನಿಧ್ಯ ಕಾಯ್ದೆ, 1951, ಸೆಕ್ಸನ್ 128 ಹಾಗೂ ಕರ್ನಾಟಕ ಪಂಚಾಯತ ಕಾಯ್ದೆ 1993, ಸೆಕ್ಸನ್ 29ರ ಅಡಿಯಲ್ಲಿ ಘಟಪ್ರಭಾ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮತದಾನದ ದಿನದಂದು ಪಾಮಲದಿನ್ನಿ ಗ್ರಾಮದ ಕೆಂಪಣ್ಣ ಬಸಪ್ಪ ಹೊನಕುಪ್ಪಿ ಎನ್ನುವ ವ್ಯಕ್ತಿಯು ತನ್ನ ಮೋಬಾಯಿಲ್‍ನಲ್ಲಿ ವೋಟ್ ಮಾಡುವ ಮತಪತ್ರದ ಭಾವಚಿತ್ರವನ್ನು ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದನ್ನು ಅದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದರ ಬಗ್ಗೆ ಮತಗಟ್ಟೆಯ ಅಧ್ಯಕ್ಷಾಧಿಕಾರಿ ಅವರು ದೂರು ನೀಡಿದ್ದಾರೆಂದು ತಹಶೀಲದಾರ ಪ್ರಕಾಶ ಹೊಳೆಪ್ಪಗೋಳ ಅವರು ಪತ್ರಿಕೆ ಮಾಹಿತಿಯನ್ನು ನೀಡಿದ್ದಾರೆ.