Breaking News

ಅಭಿವೃದ್ಧಿಯೇ ನಮ್ಮ ಗುರಿ: ರಮೇಶ ಜಾರಕಿಹೊಳಿ

Spread the love

ಗೋಕಾಕ: ‘ಜನರಿಗೆ ಮೂಲ ಸೌಕರ್ಯ ಒದಗಿಸಲು ಸಂಕಲ್ಪ ತೊಟ್ಟಿದ್ದೇವೆ. ಅಭಿವೃದ್ಧಿಯೊಂದೇ ನಮ್ಮ ಮುಂದಿರುವ ಗುರಿ’ ಎಂದು ಜಲಸಂಪನ್ಮೂಲ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.

ತಾಲ್ಲೂಕಿನ ದುರದುಂಡಿ ಗ್ರಾಮದಲ್ಲಿ ಆರ್‌ಡಿಪಿಆರ್‌, ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆ ಮತ್ತು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ-3ರಡಿ ದುರದುಂಡಿ- ಬಡಿಗವಾಡ-ಮಲ್ಲಾಪೂರ ಪಿಜಿ ರಸ್ತೆ ಸುಧಾರಣೆ ಕಾಮಗಾರಿಗೆ ಭಾನುವಾರ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

‘ಬಿಜೆಪಿಯು ಸಮಗ್ರ ಪ್ರಗತಿ ಬಯಸಿದ್ದು, ಇದರ ಹಿನ್ನೆಲೆಯಲ್ಲಿ ಕಾರ್ಯ ನಿರ್ವಹಿಸಲಾಗುತ್ತಿದೆ. ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರ ಜನರ ನಿರೀಕ್ಷೆಗೂ ಮೀರಿ ಅಭಿವೃದ್ಧಿ ಪರ ಕೆಲಸಗಳನ್ನು ಮಾಡುತ್ತಿದೆ’ ಎಂದರು.

ದುರದುಂಡಿ-ಮಲ್ಲಾಪೂರ ಪಿಜಿ ರಸ್ತೆ ಕಾಮಗಾರಿಗೆ ₹ 6.20 ಕೋಟಿ ಮಂಜೂರಾಗಿದೆ. 7 ಸೇತುವೆಗಳನ್ನೊಳಗೊಂಡು ಒಟ್ಟು 7.91 ಕಿ.ಮೀ ರಸ್ತೆ ಅಭಿವೃದ್ಧಿ ಆಗಲಿದೆ. ಗುಣಮಟ್ಟದ ಕಾಮಗಾರಿ ಕೈಗೊಂಡು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು’ ಎಂದು ಸೂಚಿಸಿದರು.

ಘ.ಯೋ.ಮ.ನೀ. ಮಹಾಮಂಡಳ ಅಧ್ಯಕ್ಷ ಅಶೋಕ ಖಂಡ್ರಟ್ಟಿ, ಜಿಲ್ಲಾ ಹಾಲು ಒಕ್ಕೂಟದ ನಾಮನಿರ್ದೇಶನ ಸದಸ್ಯ ರಾಮಣ್ಣ ಬಂಡಿ, ಎಪಿಎಂಸಿ ಅಧ್ಯಕ್ಷ ಶ್ರೀಪತಿ ಗಣೇಶವಾಡಿ, ಜಿ.ಪಂ. ಸದಸ್ಯರಾದ ತುಕಾರಾಮ ಕಾಗಲ ಮತ್ತು ಮಡ್ಡೆಪ್ಪ ತೋಳಿನವರ, ಶಾಸಕ ಬಾಲಚಂದ್ರ ಜಾರಕಿಹೊಳಿ ಆಪ್ತಸಹಾಯಕ ನಾಗಪ್ಪ ಶೇಖರಗೋಳ, ಪ್ರಭಾ ಶುಗರ್ಸ್‌ ನಿರ್ದೇಶಕ ಶಿವಲಿಂಗ ಪೂಜೇರಿ, ಲಕ್ಷ್ಮಣ ಗಣಪ್ಪಗೋಳ, ಮಾಳಪ್ಪ ಜಾಗನೂರ ಮತ್ತು ಶಿದ್ಲಿಂಗಪ್ಪ ಕಂಬಳಿ, ಮುಖಂಡ ಬಸವಂತ ಕಮತಿ, ಸುಧೀರ ಜೋಡಟ್ಟಿ, ಭೀಮಶಿ ಹುಕ್ಕೇರಿ, ಹೊನ್ನಜ್ಜ ಕೋಳಿ, ಡಾ.ಶಂಕರ ಗೋರಖನಾಥ, ಭೀಮಪ್ಪ ಅಂತರಗಟ್ಟಿ, ನಿಂಗಪ್ಪ ಮಾಳ್ಯಾಗೋಳ, ಸಣ್ಣಯಲ್ಲಪ್ಪ ಅಂತರಗಟ್ಟಿ, ದುಂಡಪ್ಪ ನಿಂಗನ್ನವರ, ಕಲ್ಲಪ್ಪ ಚೌಕಾಶಿ, ಆರ್‌ಡಿಪಿಆರ್‌ ಚಿಕ್ಕೋಡಿ ಎಇ ಎ.ಬಿ. ಹೊನ್ನಾವರ, ಎಇಇ ಎಸ್.ಎಸ್. ಸಬರದ, ಗುತ್ತಿಗೆದಾರ ಬಿ.ಬಿ. ದಾಸನವರ, ಪಂಚಾಯಿತಿ ನೋಡಲ್ ಅಧಿಕಾರಿ ಎಂ.ಎಲ್. ಜನ್ಮಟ್ಟಿ ಇದ್ದರು.


Spread the love

About Laxminews 24x7

Check Also

ಮೈಸೂರಿನಿಂದ ಉದಯಪುರಕ್ಕೆ ತೆರಳುತ್ತಿದ್ದ ರೈಲಿನ ಇಂಜಿನ್​ನಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಯಾಗಿತ್ತು.

Spread the loveರಾಮನಗರ: ಬೊಂಬೆನಗರಿ ಚನ್ನಪಟ್ಟಣದ ಬಳಿ ಚಲಿಸುತ್ತಿದ್ದ ರೈಲಿನ ಇಂಜಿನ್​​ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ಇಂದು (ಗುರುವಾರ) ನಡೆದಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ