ಹೆಡ್ ಲೈನ್ – ಘಟಫ್ರಭಾ ಪೊಲೀಸರಿಂದ ಅಪಘಾತ ತಡೆ ಜಾಗೃತಿ…ಕಬ್ಬು ತುಂಬುವ ಟ್ರ್ಯಾಕ್ಟರ್ ಚಾಲಕರಿಗೆ ಜಾಗೃತಿ ಮೂಡಿಸಿ ಖಡಕ್ ಸೂಚನೆ…
ಆ್ಯಂಕರ್- ಇತ್ತೀಚೆಗೆ ಎರಡು ವಾರಗಳ ಹಿಂದಷ್ಟೇ ಮೂಡಲಗಿ ತಾಲೂಕಿನ ಸಂಗನಕೇರೆ ಗ್ರಾಮದ ಬಳಿ ನಡೆದ ಅಪಘಾತದಿಂದಾಗಿ ಕೊನೆಗೂ
ಎಚ್ಚರಗೊಂಡಿರು ಘಟಪ್ರಭಾ ಪೊಲೀಸರು, ಕಬ್ಬು ತುಂಬುವ ಚಾಲಕರನ್ನು ಒಂದೇಡೇ ಸೇರಿಸಿ ಅಪಘಾತ ತಡೆ ಜಾಗೃತಿ ಮೂಡಿಸಿದರು. ಸತೀಶ ಶುಗರ್ಸ್ ಹುಣಶ್ಯಾಳ ಪಿಜಿ ಬಳಿ ಟ್ರ್ಯಾಕ್ಟರ್ ಚಾಲಕರನ್ನು ಉದೇಶಿಸಿ ಮಾತನಾಡಿದ. ಘಟಪ್ರಭಾ ಪೊಲೀಸರ ಅಧಿಕಾರಿ, ಚಾಲಕರು ಟ್ರ್ಯಾಕ್ಟ್‌ರನಲ್ಲಿ ಟೆಪ್ ರೆಕಾರ್ಡ್‌ರಗಳನ್ನು ಹಚ್ಚುವ ಹಾಗಿಲ್ಲ. ಒಂದುವೇಳೆ ಹಚ್ಚಿದಲ್ಲಿ ಅದನ್ನು ಅದನ್ನು ವಶಕ್ಕೆ ಪಡೆದುಕೊಳ್ಳಲಾಗುತ್ತದೆ ಎಂದರು. ಅಲ್ಲದೆ ಕಬ್ಬು ತುಂಬುವ ಟ್ರ್ಯಾಕ್ಟರ್‌ಗಳಲ್ಲಿ ಕಬ್ಬನ್ನು ಅಲ್ಕ ಪಕ್ಕಕ್ಕೆ ಬರುವ ಹಾಗೇ ತುಂಬುವ ಹಾಗಿಲ್ಲ. ಗ್ರಾಮಗಳಲ್ಲಿ ಮುಖ್ಯ ರಸ್ತೆ ಮೇಲೆ ನಿಲ್ಲಿಸಿ ಹೋಗುವುವ ಹಾಗಿಲ್ಲವೆಂದು ಖಡಕ್ ಸೂಚನೆ ನೀಡಿದರು. ಎಲ್ಲರೂ ಅಪಘಾತಗಳನ್ನು ತಡೆಯುವುದಕ್ಕೆ ನೀವು ಕೈಜೋಡಿಸಬೇಕು ಇಲ್ಲವಾದಲ್ಲಿ ಕಠಿಣ ಕ್ರಮಗಳನ್ನು ನಾವು ತೆಗೆದುಕೊಳ್ಳಬೇಕಾಗುತ್ತೆ ಎಂದು ಇದೇವೇಳೆ ಎಚ್ಚರಿಕೆ ನೀಡಿದರು.