Breaking News

ಗದಗ: ಕೆರೆಯಲ್ಲಿ ಈಜಲು ತೆರಳಿದ್ದ 9ನೇ ತರಗತಿ ವಿದ್ಯಾರ್ಥಿಗಳಿಬ್ಬರು ಸಾವು; ಓರ್ವ ಬಚಾವ್​

Spread the love

ಗದಗ: ಕರೆಯಲ್ಲಿ ಈಜಲು ತೆರಳಿ 9ನೇ ತರಗತಿಯ ಮೂವರ ಪೈಕಿ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿರುವಂತಹ ಘಟನೆ ಗದಗ ತಾಲೂಕಿನ ಚಿಂಚಲಿ ಗ್ರಾಮದಲ್ಲಿ ನಡೆದಿದೆ. ಡಾ. ಅಂಬೇಡ್ಕರ ಮೆಟ್ರಿಕ್ ಪೂರ್ವ ವಸತಿ ನಿಲಯದ ಪರಶುರಾಮ ವಡ್ಡರ ಮತ್ತು ಬಸವರಾಜ ಬಡಿಗೇರ ಮೃತ ವಿದ್ಯಾರ್ಥಿಗಳು. ಓರ್ವ ವಿದ್ಯಾರ್ಥಿ ಬಚಾವ್ ಆಗಿದ್ದಾನೆ. ಮುಳಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಮುಂಡರಗಿ ತಾಲೂಕಿನ ಹಮ್ಮಿಗಿ ಗ್ರಾಮದ ಪರಶುರಾಮ ವಡ್ಡರ, ಬೆಳದಡಿ ಗ್ರಾಮದ ಬಸವರಾಜ ಬಡಿಗೇರ ಮತ್ತು ಇನ್ನೋರ್ವ ವಿದ್ಯಾರ್ಥಿ ಖಾಸಗಿ ಶಾಲೆಯಲ್ಲಿ 9ನೇ ತರಗತಿಯಲ್ಲಿ ಓದುತ್ತಿದ್ದರು. ಇಂದು ಶಾಲೆ ಮುಗಿಸಿಕೊಂಡು 3 ವಿದ್ಯಾರ್ಥಿಗಳು ಕೆರೆಯಲ್ಲಿ ಈಜಲು ತೆರಳಿದ್ದಾರೆ.

ಈ ವೇಳೆ ಇಬ್ಬರು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದು, ಓರ್ವ ವಿದ್ಯಾರ್ಥಿ ಬಚಾವ್​ ಆಗಿದ್ದಾನೆ. ಸದ್ಯ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರೂ ಬರದಿದ್ದಕ್ಕೆ ಆಕ್ರೋಶ ವ್ಯಕ್ತವಾಗಿದೆ. ಇನ್ನು 20 ಅಡಿ ಆಳದ ಕೆರೆಯಲ್ಲಿ ಸ್ಥಳೀಯರು ಮತ್ತು ಮುಳುಗು ತಜ್ಞರಿಂದ ಸತತ ಆರು ಗಂಟೆಗಳ ನಿರಂತರ ಶೋಧ ಬಳಿಕ ಬಾಲಕರ ಶವ ಪತ್ತೆಯಾಗಿವೆ.

ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದ ಹೊರವಲಯದಲ್ಲಿ ದುಷ್ಕರ್ಮಿಗಳಿಂದ ಯುವಕನ ಕತ್ತುಕೊಯ್ದು ಬರ್ಬರವಾಗಿ ಹತ್ಯೆ ಮಾಡಿರುವಂತ ಘಟನೆ ನಡೆದಿದೆ. ಶಿಗ್ಲಿ ಗ್ರಾಮದ ಮೊಹ್ಮದ್ ಫಾರೂಕ್ ಶೇಖ್ ಸನದಿ(25) ಕೊಲೆ ಆದ ಯುವಕ. ಘಟನಾ ಸ್ಥಳಕ್ಕೆ ಲಕ್ಷ್ಮೇಶ್ವರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಸದ್ಯ ಪೊಲೀಸರಿಗೆ ಯುವಕನ ಕೊಲೆ ಕೇಸ್​ ತಲೆನೋವಾಗಿದೆ. ಹಂತಕರ ಸುಳಿವಿಗಾಗಿ ಖಾಕಿ ತೀವ್ರ ಶೋಧ ನಡೆಸಿದೆ. ಸೋಕೋ ತಂಡದಿಂದ ಪರಿಶೀಲನೆ ನಡೆಸಿದ್ದು, ಹಂತಕರ ಪತ್ತೆಗಾಗಿ ಶ್ವಾನ ದಳದಿಂದ ಶೋಧ ಮಾಡಲಾಗಿದೆ. ನಿನ್ನೆ ಮಧ್ಯಾಹ್ನ ಫೋನ್ ಕಾಲ ಬಂದ ಬಳಿಕ ಮನೆಯಿಂದ ಹೋಗಿದ್ದ ಯುವಕ ಇದೀಗ ಹೆಣವಾಗಿ ಪತ್ತೆ ಆಗಿದ್ದಾನೆ. ಸದ್ಯ ಯುವಕನ ಹತ್ಯೆ ಲಕ್ಷ್ಮೇಶ್ವರ ಪಟ್ಟಣವನ್ನು ಬೆಚ್ಚಿಬಿಳಿಸಿದೆ.


Spread the love

About Laxminews 24x7

Check Also

ಕಪ್ಪತ್ತಗುಡ್ಡದಲ್ಲಿ ಮತ್ತೊಂದು ಸಂಪತ್ತಿನ ಗುಹೆ ರಹಸ್ಯ ಬಯಲು: ಸಂಜೀವಿನಿ ಗುಡ್ಡದೊಳಗೊಂದು ವಿಸ್ಮಯ ಲೋಕ

Spread the loveಗದಗ: ಐತಿಹಾಸಿ ಲಕ್ಕುಂಡಿಯಲ್ಲಿ ಚಿನ್ನದ ನಿಧಿ ಸಿಕ್ಕ ಬಳಿಕ ಸಂಪತ್ತಿನ ಖಜಾನೆಗಳ ಒಂದೊಂದು ರಹಸ್ಯಗಳು ಬಯಲಾಗುತ್ತಿವೆ. ಲಕ್ಕುಂಡಿ ಸಂಪತ್ತನ್ನೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ